ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೂದನೂರು ರಸ್ತೆ ಡಾಂಬರೀಕರಣ ಪರಿಶೀಲನೆ

Rashmi Kasaragodu
Updated On : 17 Mar 2013, 11:35 am

ಕ.ಪ್ರ.ವಾರ್ತೆ   ಅರಕಲಗೂಡು   ಮಾ.17
ತಾಲೂಕಿನ ಗಡಿ ಭಾಗವಾದ ಕೇರಳಾಪುರ ಗ್ರಾಪಂ ವ್ಯಾಪ್ತಿಯ ಬೂದನೂರು ಗ್ರಾಮದ ರಸ್ತೆ ಡಾಂಬರೀಕರಣ ಹಾಗೂ ರಸ್ತೆ ಅಂಚಿನ ಹಾಕಿರುವ ಮಣ್ಣಿನ ಗುಣಮಟ್ಟವನ್ನು ಶಾಸಕ ಎ. ಮಂಜು ಪರಿಶೀಲಿಸಿದರು.
ರಾಜ್ಯ ಹೆದ್ದಾರಿಯ ಉನ್ನತೀಕರಣ ಯೋಜನೆಯಡಿಯಲ್ಲಿ ರಾಮನಾಥಪುರ ಹೋಬಳಿ ಕೇರಳಾಪುರ ಹಾಸನ ಗಡಿ ಕರ್ತಾಳು ಹತ್ತಿರದಿಂದ ಕೇರಳಾಪುರ, ಬೂದನೂರು, ಡೊಂಬರಕೊಪ್ಪಲು ಗ್ರಾಮದವರೆವಿಗೆ 5.ಕಿ.ಮೀ. ದೂರದ ಕಾಮಗಾರಿಗೆ 2.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದರು.
ಕೇರಳಾಪುರ ಗ್ರಾಮದಲ್ಲಿ ಪರಿಶಿಷ್ಟ ಕಾಲೋನಿಗೆ 9.5 ಲಕ್ಷ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇರಳಾಪುರಕ್ಕೆ 5 ವರ್ಷದ ನನ್ನ ಅವಧಿಯಲ್ಲಿ 10 ಲಕ್ಷ ವೆಚ್ಚದಲ್ಲಿ ಎರಡು ಹಿರಿಯ ಪ್ರಾಥಮಿಕ ಶಾಲೆಗಳ ನಿರ್ಮಾಣ, 10 ಲಕ್ಷ ವೆಚ್ಚದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ, 1.2 ಕೋಟಿ ವೆಚ್ಚದಲ್ಲಿ ಸುವರ್ಣ ಗ್ರಾಮ ಯೋಜನೆ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳ ವಿವರ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬೂದನೂರು ಅಣ್ಣೇಗೌಡ, ಕೇರಳಾಪುರ ಗ್ರಾಪಂ ಅಧ್ಯಕ್ಷ ಕರೀಗೌಡ, ಸದಸ್ಯೆ ರತ್ನಮ್ಮ, ಹೋಬಳಿ ಅಧ್ಯಕ್ಷ ಜಿ.ಸಿ. ಮಂಜೇಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿರದನಹಳ್ಳಿ ಮಲ್ಲೇಶ್, ಕೇರಳಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ ರವಿ, ಮುಖಂಡರಾದ ಗೋವಿಂದೇಗೌಡ, ತಮ್ಮಯ್ಯ, ಈರಯ್ಯ, ನಿಂಗಯ್ಯ, ರಾಮಯ್ಯ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement