ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೇಜವಾಬ್ದಾರಿಯಿಂದ ಅನಾಹುತ ಹೆಚ್ಚು

Rashmi Kasaragodu
Updated On : 17 Mar 2013, 11:38 am

ಕ.ಪ್ರ.ವಾರ್ತೆ ಟಿ ಹಾಸನ ಟಿ  ಮಾ.17
ವಿದ್ಯಾರ್ಥಿಗಳು ಪ್ರಾಪ್ತ ವಯಸ್ಕರಾದ ಮೇಲೆ ಚಾಲನಾ ಪರವಾನಗಿ ಪಡೆದುಕೊಂಡ ನಂತರವಷ್ಟೇ ಬೈಕ್ ಮತ್ತಿತರ ವಾಹನಗಳ ಚಾಲನೆ ಮಾಡಬೇಕು ಎಂದು ನ್ಯಾಯಾಧೀಶ ಜಯಂತಕುಮಾರ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,  ಜಿಲ್ಲಾ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ   ನಗರದ ಗವೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇಜವಾಬ್ದಾರಿ ವರ್ತಿಸುವುದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ವಿವರಿಸಿದ ಅವರು,
ಎಲ್ಲರೂ ಜನನ ಹಾಗೂ ಮರಣದ ಬಗ್ಗೆ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಶಾಲೆಗೆ ಸೇರುವಾಗಲೆ ಸರಿಯಾದ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ  ಮುಂದೆ ಒದಗಬಹುದಾದ ಸಮಸ್ಯೆಗಳ ಬಗ್ಗೆ ವಿವರಿಸಿದರು.  ವಿದ್ಯಾರ್ಥಿ ಹಂತದಿಂದಲೇ ಕಾನೂನನ್ನು ಅರಿತವು ಪಾಲಿಸುವ ಮೂಲಕ ಉತ್ತಮ ಪ್ರಜೆಯಾಗಬೇಕು ಎಂದರು.
ನ್ಯಾಯಾಧೀಶೆ ಎಸ್.ಎಸ್. ಕುನ್ನಿಬಾವಿ ಮಾತನಾಡಿ,  ವಿದ್ಯಾರ್ಥಿಗಳಿಗೆ  ಪರೀಕ್ಷಾ ಸಮಯವಾದ್ದರಿಂದ  ವಿದ್ಯಾರ್ಥಿಗಳು  ಯಾವ ರೀತಿಯಲ್ಲಿ  ಪರೀಕ್ಷಾಸಿದ್ಧತೆಯನ್ನು  ಮಾಡಿಕೊಂಡು ಪರೀಕ್ಷೆ  ಎದುರಿಸಬೇಕೆಂಬ ಬಗ್ಗೆ  ಮಾಹಿತಿ ನೀಡಿ, ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ  ಯಶಸ್ಸು ಗಳಿಸಲೆಂದು ಹಾರೈಸಿದರು. ಸಂಪನ್ಮೂಲ ವ್ಯಕ್ತಿ ಎಂ.ಜಿ. ಗಿರಿಜಾಂಬಿಕಾ ಅವರು ಮಕ್ಕಳ  ಹಕ್ಕುಗಳ ಬಗ್ಗೆ ಹಾಗೂ  ವಿಶ್ವಮಕ್ಕಳ ದಿನಾಚರಣೆ ಬಗ್ಗೆ ಮಾಹಿತಿ ನೀಡಿದರು.  ಸಂಪನ್ಮೂಲ ವ್ಯಕ್ತಿ ಬಿ.ಚಂದ್ರಶೇಖರ್ ಅವರು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಜೀವನದಲ್ಲಿ  ಸಮಸ್ಯೆಗಳು  ಎದುರಾದಾಗ  ಆರಂಭದಲ್ಲಿಯೇ  ಕಾನೂನಾತ್ಮಕವಾದ ಪರಿಹಾರ ಕಂಡುಕೊಳ್ಳಬೇಕು.  ಸಮಸ್ಯೆಗಳು  ಕೈ ಮೀರಿದಾಗ  ಪರಿಹಾರ ಕಂಡುಕೊಂಡುಳ್ಳುವುದು ಕಷ್ಟಸಾಧ್ಯ ಎಂದು  ಉದಾಹರಣೆಗಳ ಮೂಲಕ  ವಿವರಿಸಿದರು.
ಜಿಲ್ಲಾ ಸಾಂಸ್ಕೃತಿಕ ವೇದಿಕೆಯ ಉಪಾಧ್ಯಕ್ಷೆ ಮಮತಾ ಶಿವು,  ಸದಸ್ಯೆ ಬಿ.ವೇದಾವತಿ ಇದ್ದರು.  ವಿದ್ಯಾರ್ಥಿನಿ ಪೂಜಾ ಪ್ರಾರ್ಥಿಸಿದರು.  ಮುಖ್ಯೋಪಾಧ್ಯಾಯಿನಿ ಎಚ್.ಟಿ.ಶಶಿಕಲಾ ಸ್ವಾಗತಿಸಿದರು. ಸಹ ಶಿಕ್ಷಕ ಅಬ್ದುಲ್ರಾವೂತ್ ನಿರೂಪಿಸಿದರು.  ಸಹ ಶಿಕ್ಷಕ ವೈ.ಬಿ.ರವಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement