ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮುಸ್ಲಿಂ- ಕ್ರಿಶ್ಚಿಯನ್ ಪ್ರೇಮಿಗಳು ಹಿಂದೂ ಸಂಪ್ರದಾಯದಂತೆ ಮದುವೆ

Rashmi Kasaragodu
Updated On : 17 Mar 2013, 11:37 am

ಹಾಸನ: ಮುಸ್ಲಿಂ- ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಪ್ರೇಮಿಗಳಿಬ್ಬರು ಹಿಂದೂ ಸಂಪ್ರದಾಯದಂತೆ ಪ್ರೇಮ ವಿವಾಹವಾದ ಅಪರೂಪದ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ಶ್ರೀ ರಾಮದೇವರ ಸನ್ನಿಧಿಯಲ್ಲಿ ಮನೆಯವರ ವಿರೋಧವಿದ್ದರೂ, ಸ್ನೇಹಿತರ ಸಹಕಾರದಿಂದ ಭದ್ರಾವತಿಯ ರುಕಿಯಾ ಮತ್ತು ಗೋವಾದ ಕ್ಲೆಮೆನ್ ಫರ್ನಾಂಡಿಸ್ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟರು.  ಕಳೆದ 8 ವರ್ಷಗಳಿಂದ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಆದ್ರೆ ಇಬ್ಬರ ಮದುವೆಗೆ ಎರಡೂ ಮನೆಯವರಿಂದ ತೀವ್ರ ವಿರೋಧ ಎದುರಾಯಿತು. ಆದರೂ ವಿಚಲಿತರಾದ ಜೋಡಿಗಳು ಸ್ನೇಹಿತರ ಸಹಕಾರದಿಂದ ಮದುವೆಯಾಗಿದ್ದಾರೆ. ಇಬ್ಬರದೂ ಬೇರೆ ಬೇರೆ ಜಾತಿಯಾದ್ರೂ, ಹಿಂದೂ ಸಂಪ್ರದಾಯದಂತೆ ಶ್ರೀರಾಮನ ಸನ್ನಿಧಿಯಲ್ಲಿ ಹಾರ ಬದಲಿಸಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದರಿಂದ ಪ್ರೇಮ ಫಲಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಹೊಸ ಜೋಡಿಗಳು ಉತ್ತಮ ಬಾಳುವೆ ಮಾಡುವ ವಾಗ್ದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement