ವಿದ್ಯಾರ್ಥಿಗಳೇ... ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಂಜುನಾಥಾಚಾರ್
ಕ.ಪ್ರ.ವಾರ್ತೆ ಜಾವಗಲ್ ಮಾ. 17
ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಆತ್ಮವಿಶ್ವಾಸ ಬೆಳಸಿಕೊಳ್ಳುವಂತೆ ಉಪ ಪ್ರಾಂಶುಪಾಲ ಮಂಜುನಾಥಾಚಾರ್ ಕಿವಿಮಾತು ಹೇಳಿದ ರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ವ್ಯಾಪ್ತಿಗೆ ಬರುವ ಜಾವಗಲ್ನ ಸರ್ಕಾರಿ ಪದವಿ ಪೂರ್ವ ಕಾಲೇಜು, ಡಾ. ಅಂಬೇಡ್ಕರ್ ಪ್ರೌಢಶಾಲೆ, ಮಾಡೆಲ್ ಪ್ರೌಢಶಾಲೆ, ಬಂದೂರು ಮತ್ತು ನೇರ್ಲಿಗೆ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಸಮಾವೇಶದ ಅಧ್ಯಕ್ಷೆ ವಹಿಸಿ ಮಾತನಾಡಿದರು.
ಪರೀಕ್ಷಾ ಕೇಂದ್ರಕ್ಕೆ ಹೋಗುವ ಮೊದಲು ಕೈಗೊಳ್ಳಬೇಕಾದ ಪೂರ್ವ ಸಿದ್ಧತೆ, ಬರೆಯುವ ವಿಧಾನ, ಬಳಸುವ ಪರಿಕರಗಳು, ಹೆಚ್ಚು ಅಂಕ ಪಡೆಯುವ ಮಾರ್ಗೋಪಾಯದ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಅಂಬೇಡ್ಕರ್ ಪ್ರೌಢಶಾಲೆಯ ಚಾವಡಿ, ಬಂದೂರು ಪ್ರೌಢಶಾಲೆಯ ರವಿ ಮಾತನಾಡಿ, ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಕ್ರಮಗಳು, ಊಟ, ನಿದ್ದೆ, ನಿಯಮಿತ ಓದು, ಕಾಳಮಿತಿಯಲ್ಲಿ ಉತ್ತರಿಸುವ ಅಭ್ಯಾಸ, ಪರೀಕ್ಷೆ ವಿನಾ ಇತರೆ ಯಾವುದೇ ಕೌಟುಂಬಿಕ ಸಮಸ್ಯೆಗಳಿಗೆ ಗಮನ ಹರಿಸದಿರುವುದು. ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ, ಪರೀಕ್ಷಾ ಕೇಂದ್ರ ಮತ್ತು ಕೊಠಡಿಯಲ್ಲಿ ಪಾಲಿಸಬೇಕಾದ ನಿಯಮ ಬಗ್ಗೆ ತಿಳಿಸಿದರು.
ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಪರಸ್ಪರ ಪರಿಚಯ ಮತ್ತು ಸಮಾಲೋಚನೆ ನಡೆಸಲಾಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಶಿಕ್ಷಕರಾದ ಪುಟ್ಟಶಂಕರಪ್ಪ, ಚಂದ್ರೇಗೌಡ, ಶಿವಲಿಂಗಮೂರ್ತಿ, ಮರುಳ ಸಿದ್ದಪ್ಪ, ಡಾ. ಅಂಬೇಡ್ಕರ್ ಪ್ರೌಢಶಾಲೆಯ ಅಶೋಕ್ಲಾಲ್, ಮಾಡೆಲ್ ಪ್ರೌಢಶಾಲೆಯ ರಾಜೇಶ್ವರಿ, ನೇರ್ಲಿಗೆ ಪ್ರೌಢಶಾಲೆಯ ಸೀಬಾ ವರ್ಗೀಸ್ ಇದ್ದರು.