ಸೋಲಾರ್ಲೈಟ್ಗೆ ಶಾಸಕರಿಂದ ಚಾಲನೆ
ಹಾಸನ: ನಗರದ ನಾನಾ ಕಡೆ ಅಳವಡಿಸಲಾಗಿರುವ ಸೋಲರ್ಲೈಟ್ಗೆ ಶಾಸಕ ಎಚ್.ಎಸ್. ಪ್ರಕಾಶ್ ಹಾಗೂ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಚಾಲನೆ ನೀಡಿದರು. ಮಹಾರಾಜ ಪಾರ್ಕ್ನಲ್ಲಿ ಅಳವಡಿಸಲಾಗಿರುವ ಸೋಲಾರ್ಲೈಟ್, ಹೊಸ ಬಸ್ನಿಲ್ದಾಣ, ಡಡಿಸಿ ಕಚೇರಿ ಬಳಿ ಬಿ.ಎಂ. ರಸ್ತೆಯಲ್ಲಿ ಅಳವಡಿಸಲಾಗಿರುವ ಸೋಲಾರ್ಲೈಟ್ ಕೂಡಾ ಉದ್ಘಾಟಿಸಿದರು. ನಗರಸಭೆ ಆಯುಕ್ತ ನಾಗಭೂಷಣ್, ಎಂಜಿನಿಯರ್ ನಾಗೇಂದ್ರ ಇದ್ದರು.
ಈಜಲುಹೋದ ವಿದ್ಯಾರ್ಥಿ ಸಾವು
ಚನ್ನರಾಯಪಟ್ಟಣ: ವಿದ್ಯಾರ್ಥಿ ನಿಲಯದಲ್ಲಿದ್ದ ಬಾಲಕನೊಬ್ಬ ಈಜಲು ಹೋಗಿ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ತಾಲೂಕಿನ ಆನೇಕೆರೆಯಲ್ಲಿ ನಡೆದಿದೆ. ಆನೇಕೆರೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿದ್ದ 6ನೇ ತರಗತಿ ವಿನೋದ್ಕುಮಾರ್ (11) ಮೃತ ವಿದ್ಯಾರ್ಥಿ. ಗ್ರಾಮದ ಕೆರೆಯ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿ ಈಜಲು ಹೋಗಿ ಹೊರಬರಲಾಗದೆ ಮೃತಪಟ್ಟಿದ್ದಾನೆ. ಗ್ರಾಮಾಂತರ ಪೊಲೀಸರು ದೂರು ದಾಖಲಾಗಿದೆ.