ಅಂಗಡಿ ಕಟ್ಟಡದ ಸಜ್ಜಾ ಕುಸಿದು 7 ಮಂದಿ ಗಾಯ
ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ ಮಾ.19
ಬಸ್‌ಗಾಗಿ ಅಂಗಡಿ ಮುಂದೆ ಕಾಯುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಮೇಲೆ ಅಂಗಡಿ ಕಟ್ಟಡದ ಸಜ್ಜಾ ಕುಸಿದು 7 ಮಂದಿ ಗಾಯಗೊಂಡಿರುವ ಘಟನೆ ಶ್ರವಣಬೆಳಗೊಳದಲ್ಲಿ ಮಂಗಳವಾರ ಸಂಜೆ ನಡೆದಿದೆ.ಹಿರೀಸಾವೆ ರಸ್ತೆಯ ಎಸ್‌ಬಿಎಂ ಪಕ್ಕದಲ್ಲಿರುವ ಅಂಗಡಿಯೊಂದರ ಸಜ್ಜಾ ಕುಸಿದು ಬಿದ್ದ ಪರಿಣಾಮ ಅಂಗಡಿ ಮುಂದೆ ಬಸ್ಸಿಗಾಗಿ ಕಾಯುತ್ತಿದ್ದ ಸುಂಡಹಳ್ಳಿಯ ನಿಂಗಮ್ಮ ತೀವ್ರ ಗಾಯಗಳಾಗಿದ್ದು, ವಿದ್ಯಾರ್ಥಿಗಳಾದ ಪೂಜಾ, ಪ್ರಿಯಾಂಕ, ರಕ್ಷಿತಾ, ಜೀವನ್, ರಾಘವೇಂದ್ರ, ಅನುಪಮ ಹಾಗೂ ಮತ್ತೋರ್ವ ಮಹಿಳೆ ಶಾಂತಮ್ಮ ಅವರುಗಳಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಶ್ರವಣಬೆಳಗೊಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಜೂಜಾಟ: 10 ಜನರ ಬಂಧನ
ಅರಸೀಕೆರೆ: ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಜೂಜಾಡುತ್ತಿದ್ದ 10 ಮಂದಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಕಾಳನಕೊಪ್ಪಲಿನ ಸಮೀಪ ಸೋಮವಾರ ನಡೆದಿದೆ. ಪಟ್ಟಣದ ಮಲ್ಲೇಶ್ವರ ನಗರದ ತೊಳಚನಾಯಕ (50), ಗಣೇಶ (23), ರೇವಣ್ಣ (48), ಮೂರ್ತಿ (48) ಮತ್ತು ಲಕ್ಷ್ಮಣ (43) ಎಂಬವರನ್ನು ಬಂಧಿಸಲಾಗಿದೆ. ತಾಲೂಕಿನ ಕಾಳನಕೊಪ್ಪಲು, ಗಂಗಾನಗರದ ಸಮೀಪ ಇರುವ ಹಲಸಿನ ಮರದ ಕೆಳಗೆ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದು, ಪಣಕ್ಕಿಟ್ಟಿದ್ದ 5200 ರು. ವಶಪಡಿಸಿಕೊಂಡಿದ್ದಾರೆ.
ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. ಮತ್ತೊಂದು ಪ್ರಕರಣದಲ್ಲಿ ಹಾಸನದ ಸಂತೇಪೇಟೆ ಸ್ಕೂಲ್ ಮೈದಾನದಲ್ಲಿ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಮುಜಾಯಿದ್ (40), ಶ್ಯಾಮ್ (32), ವಿಜಯ್ (29), ಹೇಮಂತ್‌ಕುಮಾರ್ (32) ಮತ್ತು ಉಮೇಶ್ (31) ಎಂಬುವರನ್ನು ಬಂಧಿಸಿದ್ದು, 2700 ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.