ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂಚೆಕೊಪ್ಪಲು ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

Parashurama
Updated On : 19 Mar 2013, 9:58 am

ಕ.ಪ್ರ ವಾರ್ತೆ೤ ಅರಸೀಕೆರೆ೤ ಮಾ.19
ಪಟ್ಟಣದ ಅಂಚೆಕೊಪ್ಪಲಿನ ರಸ್ತೆ ಸಂಪೂರ್ಣ ಹಾಳಾಗಿ ಸುಮಾರು ಒಂದೂವರೆ ದಶಕ ಕಳೆದಿದ್ದು ಗುಂಡಿ ಗೊಟರುಗಳಿಂದ, ವಾಹನ ಚಾಲಕರಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಕನ್ನಡಪ್ರಭ ಬೆಳಕು ಚೆಲ್ಲಿದ್ದು, ಇದರಿಂದ ಎಚ್ಚೆತ್ತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೊನೆಗೂ ಈ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.
ಈ ರಸ್ತೆ ಪಟ್ಟಣದಿಂದ ಅಂಚೆಕೊಪ್ಪಲು ಮಾರ್ಗವಾಗಿ ಜಾವಗಲ್‌ಗೆ ಸೇರಲಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸಿದರೆ ಕನಿಷ್ಠ 10 ಕಿ.ಮೀ. ಕಡಿಮೆಯಾಗಲಿದ್ದು ವಾಹನ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಈ ಭಾಗದಲ್ಲಿ ಬರುವ ಗ್ರಾಮಸರಿಗೆ ಅನುಕೂಲ ಕಲ್ಪಿಸಿದಂತಾಗಿದೆ. 80 ಲಕ್ಷ ರು. ವೆಚ್ಚದಲ್ಲಿ ಕಾಂಕ್ರಿಟ್ ಹಾಗೂ ಡಾಂಬರ್ ರಸ್ತೆ ಮಾಡುವ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಅರಸೀಕೆರೆ ಕ್ಷೇತ್ರಕ್ಕೆ ಒಳಪಡುವ ಈ ರಸ್ತೆಯಲ್ಲಿನ ಆಯ್ದ ಭಾಗಗಳಲ್ಲಿ 1.1 ಕಿ.ಮೀ ಕಾಂಕ್ರಿಟ್ ರಸ್ತೆ ಹಾಗೂ 2.4 ಕಿ.ಮೀ ಡಾಂಬರ್ ರಸ್ತೆ ನಿರ್ಮಾಣವಾಗಲಿದೆ. ಗ್ರಾಮೀಣ ಜನತೆಗೆ ಅರಸೀಕೆರೆಯನ್ನು ಸಂಪರ್ಕಿಸಲು ಇದು ಪ್ರಮುಖ ರಸ್ತೆಯಾಗಿದ್ದು  ಬಹಳ ವರ್ಷಗಳಿಂದ ಜನತೆ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಹಿಂದೆ ರಸ್ತೆ ನಿರ್ಮಾಣವಾಗಿತ್ತಾದರೂ ಉತ್ತಮ ಸ್ಥಿತಿಯಲ್ಲಿರದೆ ಪ್ರಯಾಣ ಪ್ರಯಾಸವಾಗುತ್ತಿತ್ತು. ಭೂಮಿ ಪೂಜೆ ವೇಳೆ ತಾಪಂ ಅಧ್ಯಕ್ಷ ಸಿದ್ದಾಬೋವಿ ಪುರಸಭಾ ಸದಸ್ಯ ಪಂಚಾಕ್ಷರಿ ಭಾಗ್ಯಲತಾ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments