ಅಭಿವೃದ್ಧಿ ಕಾಮಗಾರಿಯಲ್ಲಿ ಶಾಸಕರಿಂದ ಸೇಡಿನ ರಾಜಕೀಯ
ಕ.ಪ್ರ ವಾರ್ತೆ ಸಕಲೇಶಪುರ ಮಾ.19
ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿ ಸೇಡಿನ ರಾಜಕೀಯ ಮಾಡುತ್ತಿದ್ದಾರೆಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಸ್.ಎ ಮೋಹನ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ನಿಧಿಯ 5 ಕೋಟಿ ಅನುದಾನದಲ್ಲಿ ಅದ್ಯತೆ ಮೇರೆಗೆ ತುರ್ತು ಕಾಮಗಾರಿ ಕೈಗೊಳ್ಳಲು ಪುರಸಭೆ ಸಾಮಾನ್ಯಸಭೆಯಲ್ಲಿ ನಿರ್ಣಯ ಮಾಡಿದ್ದು, ಇದರಲ್ಲಿ ಪುರಸಭೆಯ 2 ನೇ ವಾರ್ಡಿನ ನಾನಾ ಕಾಮಗಾರಿಗಳಿಗಾಗಿ 20 ಲಕ್ಷ ಅನುದಾನದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ ಅನುಮೋದನೆ ಪಡೆದ ಪಟ್ಟಿಯಲ್ಲಿ 2 ನೇವಾರ್ಡಿನ ಯಾವುದೆ ಕಾಮಗಾರಿಗಳು ಸೇರದೆ ಇರುವುದು ಅವರ ಸೇಡಿನ ರಾಜಕಾರಣವನ್ನು ಸ್ವಷ್ಟಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ನಿಂದ ಪುರಸಭೆ ಸದಸ್ಯರಾಗಿ ಗೆದ್ದಿರುವವವರ ವಾರ್ಡಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಟ್ಟಿರುವ ಶಾಸಕರು ಇತರೆ ಪಕ್ಷದಿಂದ ಗೆದ್ದಿರುವ ಪುರಸಭಾ ಸದಸ್ಯರ ವಾರ್ಡ್ಗಳಲ್ಲಿ ಯಾವುದೆ ಅನುದಾನ ಮೀಸಲಿಡದೆ ಅಭಿವೃದ್ಧಿ ಕಾಮಗಾರಿಗಳಲ್ಲೂ ಮಲತಾಯಿ ಧೋರಣೆ ಅನುಸರಿಸಿದ್ದಾರೆ ಎಂದರು.
ಪಟ್ಟಣದ ದೊಡ್ಡಕೆರೆ ಅಭಿವೃದ್ಧಿಗೆ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಬೈಕೆರೆ ನಾಗೇಶ್ ಶ್ರಮ ಸಾಕಷ್ಟಿದ್ದು, ಇವರ ಅನುಪಸ್ಥಿತಿಯಲ್ಲಿ ಕಾಮಗಾರಿ ಉದ್ಘಾಟಿಸಿರುವ ಶಾಸಕರು, ಸೌಜನ್ಯಕ್ಕೂ ಅವರನ್ನು ನೆನಪಿಸಿ ಕೊಳ್ಳದಿರುವುದು ಅವರ ಸಣ್ಣತನದ ರಾಜಕೀಯವನ್ನು ಎತ್ತಿ ತೋರಿಸುತ್ತಿದೆ ಎಂತಲೂ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.