ರೇಷ್ಮೆ ಪರಿಕರ ಕೊಳ್ಳುವಾಗ ಜಾಗ್ರತೆ ಮುಖ್ಯ
ಕನ್ನಡಪ್ರಭವಾರ್ತೆ ಅರಸೀಕೆರೆ ಮಾ.19
ಮಹಿಳೆಯರು ರೇಷ್ಮೆ ಪರಿಕರಗಳನ್ನು ಕೊಳ್ಳುವಾಗ ಮುಂದಾಲೋಚಿಸುವ ಅಗತ್ಯವಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಸಹಾಯಕ ನಿರ್ದೇಶಕ ಗೋವಿಂದಚಾರಿ ಸಲಹೆ ನೀಡಿದರು.
ಪಟ್ಟಣದ ರೋಟರಿ ಭವನದಲ್ಲಿ ಇನ್ನರ್ವೀಲ್ ಹಾಗೂ ಭಾರತ ಸರ್ಕಾರದ ರೇಷ್ಮೆ ಮಂಡಳಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಷ್ಮೆ ಉತ್ಪಾದಿತ ವಸ್ತ್ರಗಳ ಮಾರಾಟ ಮತ್ತು ಖರೀದಿ ವೇಳೆ ಮಹಿಳೆಯರು ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ.
ಕೆಲ ವ್ಯಾಪಾರಸ್ಥರು ನಕಲಿ ರೇಷ್ಮೆ ಪದಾರ್ಥಗಳನ್ನು ದುಬಾರಿ ಬೆಲೆಗೆ ನೀಡಿ ವಂಚಿಸುವ ವ್ಯವಸ್ಥಿತ ಕೆಲಸ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಗ್ರಾಹಕರು ಸರ್ಕಾರದ ಸಿಲ್ಕ್ ಲಾಕರ್ ಇರುವ ಅಧಿಕೃತ ರೇಷ್ಮೆ ವಸ್ತ್ರಗಳನ್ನೇ ಪರಿಶೀಲಿಸಿ ಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಇನ್ನರ್ವೀಲ್ ಅಧ್ಯಕ್ಷೆ ಸುಮನಾಭರತ್, ಪದ್ಮಾಶಂಕರ್, ರೋಟರಿ ಅಧ್ಯಕ್ಷ ಯೋಗೀಶಾಚಾರ್, ಪ್ರವೀಣ್, ಭರತ್ ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.