ರೈತರಿಗೆ ಜೀವನಮೀಸಲಿಟ್ಟ ನಂಜುಂಡಸ್ವಾಮಿ
ಹಳೇಬೀಡು: ಅನೇಕ ಚಳವಳಿಯಲ್ಲಿ ಭಾಗವಹಿಸಿದ ಕೀರ್ತಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ರೈತ ಸಂಘದ ಹಿರಿಯ ಮುಖಂಡ ರಾಜೇಗೌಡ ತಿಳಿಸಿದರು. ಹಳೇಬೀಡು ಹೋಬಳಿಯ ಚೀಲನಾಯಕನ ಗ್ರಾಮದಲ್ಲಿ ಆಯೋಜಿಸಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿ 77 ನೇ ಹುಟ್ಟು ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ರೈತರು ಸಮಾಜದಲ್ಲಿ ತಮಗೆ ಬೇಕಾಗಿರುವುದನ್ನು ಹೋರಾಟದ ಮೂಲಕ ಪಡೆಯುವ ಶಕ್ತಿ ನೀಡುತ್ತ ತಮ್ಮ ಜೀವನವನ್ನು ರೈತರಿಗೆ ಮೀಸಲಾಗಿಟ್ಟ ಮಹಾನ್ ವ್ಯಕ್ತಿಯಾಗಿದ್ದರು ಎಂದರು. ರೈತ ಸಂಘದ ತಾ.ಅಧ್ಯಕ್ಷ ಪರಮೇಶ್, ಗೌರವ ಅಧ್ಯಕ್ಷ ಪುಪ್ಪೇಗೌಡ, ಕೆ.ಪಿ. ಕುಮಾರ್, ಭೋಗ ಮಲ್ಲೇಶ್, ಕಾರ್ಯದರ್ಶಿ ಸ್ವಾಮೀಗೌಡ, ಹಳೇಬೀಡು ಚನ್ನೇಗೌಡ, ಸುದರ್ಶನ್ ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.