ಲೈಂಗಿಕ ದೌರ್ಜನ್ಯ ನಿವಾರಣಾ ವೇದಿಕೆ ರಚನೆ
ಕ.ಪ್ರವಾರ್ತೆ ಹಾಸನ ಮಾ. 19
ಮಹಿಳೆಯರು, ಅಪ್ರಾಪ್ತ ಬಾಲಕಿಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಬಗ್ಗೆ ಗಂಭೀರವಾಗಿ ಚಿಂತಿಸಿರುವ ಜಿಲ್ಲಾಡಳಿತ ಮತ್ತು ಮಾನವೀಯ ಕಳಕಳಿ ಹೊಂದಿರುವವರ ನೇತೃತ್ವದಲ್ಲಿ ಲೈಂಗಿಕ ದೌರ್ಜನ್ಯ ನಿವಾರಣಾ ವೇದಿಕೆ ಅಸ್ತಿತ್ವಕ್ಕೆ ಬಂದಿದೆ.
ಈ ಕುರಿತು ಕೆಲವು ದಿನಗಳಿಂದ ಆಸಕ್ತರು ಸೇರಿ ನಾಲ್ಕಾರು ಸಭೆ ನಡೆಸಿದ್ದು, ಜನ ಕಲ್ಯಾಣ ಸಿಟಿ ಸ್ಕ್ಯಾನ್ ಸೆಂಟರ್ನಲ್ಲಿ ಅಂತಿಮ ಸ್ವರೂಪ ಪಡೆದುಕೊಂಡಿದ್ದು ಲೈಂಗಿಕ ದೌರ್ಜನ್ಯ ನಿವಾರಣಾ ವೇದಿಕೆ ಚಾಲನೆ ಪಡೆದು ಕೊಂಡಿತು.
ಪ್ರಥಮ ಕಾರ್ಯಕ್ರಮವಾಗಿ ವೇದಿಕೆಯಿಂದ ಸಾರ್ವಜನಿಕವಾಗಿ ಹಾಗೂ ಹದಿಹರೆಯದ, ಮಕ್ಕಳಿಗೆ ಜಾಗೃತಿ ಮತ್ತು ಅರಿವು ಮೂಡಿಸಲು ನಗರ ಸಮೀಪದ ಬೂವನಹಳ್ಳಿಯಲ್ಲಿ ಮಾ. 24 ಭಾನುವಾರ ಸಂಜೆ 5ರಿಂದ 7ರವರೆಗೆ ವಿವಿಧ ಅರಿವು ಮೂಡಿ ಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಾಟಕ, ಲಾವಣಿ, ಜಾಗೃತ ಗೀತೆಗಳನ್ನು ಪ್ರಸ್ತುತಪಡಿಸುವ ಮತ್ತು ಸರಳ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾಗೃತಿ ಮೂಡಿಸುವ ಫಲಕಗಳು, ಬ್ಯಾನರ್, ಫ್ಲೆಕ್ಸ್ ಬ್ಯಾನರ್ಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ನಂದಿನಿ ದಾಸ್, ಡಾ. ಗುರುರಾಜ ಹೆಬ್ಬಾರ್, ಗೀತಾ, ಡಾ ಸೌಮ್ಯ, ಡಾ. ಪ್ರಶಾಂತ ಬಾಗಡೆ, ಡಾ. ಹೇಮಲತಾ, ಡಾ. ದಿನೇಶ್, ಲೀಲಾವತಿ, ಕೆ.ಟಿ. ಜಯಶ್ರೀ, ನಿರ್ಮಲಾ ವಿ.ದೇವ್, ಮಹಾಲಕ್ಷ್ಮಿ ದೊಡ್ಡಯ್ಯ, ವೆಂಕಟರಾಮು, ಆಲೂರು ನಾಗರಾಜ್, ಅನುಗನಾಳು ಕೃಷ್ಣಮೂರ್ತಿ, ಶಬ್ಬೀರ್, ರತ್ನ ಕಾಳೇಗೌಡ, ಯಶೋದ ಎಚ್.ಸಿ. ಇಂದಿರಾ ಮೊದಲಾದವರು ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.