ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೀವವೈವಿಧ್ಯ, ಔಷಧಿ ಸಸ್ಯಗಳ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರ

Parashurama
Updated On : 21 Mar 2013, 11:10 am

ಕನ್ನಡಪ್ರಭವಾರ್ತೆ೤ ಹಾಸನ೤ ಮಾ.21
ನಗರದ ಎವಿಕೆ ಕಾಲೇಜಿನ ಸಸ್ಯಶಾಸ್ತ್ರ ಮತ್ತು ಪರಿಸರ ಅಧ್ಯಯನ ವಿಭಾಗ ಹಾಗೂ  ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಜೀವ ವೈವಿಧ್ಯತೆ ಮತ್ತು ಅಳಿವಿನಂಚಿನ ಅಪರೂಪದ  ಔಷಧಿಯ ಸಸ್ಯಗಳ  ಕುರಿತ ರಾಷ್ಟ್ರ ಮಟ್ಟದ ಎರಡು ದಿನಗಳ ಕಾರ್ಯಾಗಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಿತು.
ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಟಿ ದ್ಯಾವೇಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಆಯುಷ್ ಇಲಾಖೆ ಮುಖ್ಯ ಆಡಳಿತಾಧಿಕಾರಿ ಕೆ.ಜ್ಯೋತಿ ಉದ್ಘಾಟಿಸಿದರು.
ಧರ್ಮಸ್ಥಳ ಮಂಜುನಾಥ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ  ಡಾ. ಪ್ರಸನ್ನ ಎನ್. ರಾವ್, ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲ ಡಾ ಜೆ. ಶೈಲಜಾಕುಮಾರಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಿ.ಬಿ. ನಂಜರಾಜ್, ಸಸ್ಯಶಾಸ್ತ್ರ ಮತ್ತು ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್. ರವಿಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮೊದಲ ದಿನದ ಕಾರ್ಯಾಗಾರದಲ್ಲಿ ಹಿಂದಿನ ಹಾಗೂ ಇಂದಿನ ಭವಿಷ್ಯದ ಪಶ್ಚಿಮಘಟ್ಟಗಳ ಔಷಧಿ ಸಸ್ಯಗಳ ವೈವಿಧ್ಯತೆ ಕುರಿತು ಕರ್ನಾಟಕ ಜೀವ ವೈವಿಧ್ಯತೆ ಮಂಡಳಿಯ ಡಾ. ಸತ್ಯನಾರಾಯಣಭಟ್ ಉಪಯುಕ್ತ ಮಾಹಿತಿ ನೀಡಿದರು.
ಜೀವನ ಶೈಲಿಯ ಏರುಪೇರು:    ಮನುಷ್ಯನ ಜೀವನ ಶೈಲಿಯಲ್ಲಿ ಏರು ಪೇರು ಹಾಗೂ ಇದಕ್ಕೆ  ಆಯುರ್ವೇದ ಪದ್ಧತಿಯಿಂದ ಪರಿಹಾರೋಪಾಯ ಕುರಿತು ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀನಿವಾಸ ಆಚಾರ್ಯ ಪ್ರಾತ್ಯಕ್ಷಿತೆ ಮುಖೇನ ವಿವರಿಸಿದರು.
ವಿಜ್ಞಾನಿ ಡಾ. ಕಲ್ಕೋಟಿ ಔಷಧಿ ತಯಾರಿಕೆಯಲ್ಲಿ ಜೀವ ವೈವಿಧ್ಯತೆ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. ಪ್ರಾಧ್ಯಾಪಕ ಡಾ. ಪ್ರಕಾಶ್ ಹೆಗಡೆ ಆಯುರ್ವೇದ ಔಷಧಿ ಸಸ್ಯ ಉಪಯೋಗಿಸುವ ಮೂಲಕ ಜೀವ ವೈವಿಧ್ಯತೆಯ ಸಂರಕ್ಷಣೆ  ವಿಷಯ ಕುರಿತು ಉಪನ್ಯಾಸ  ನೀಡಿದರು.
2ನೇ ದಿನದ ಕಾರ್ಯಾಗಾರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಹರೀಶ್‌ಭಟ್ ಜೀವಿಗಳ  ವಾಸ ತಾಣ ಸಂರಕ್ಷಣೆ ಅಗತ್ಯತೆ ಕುರಿತು ಉಪನ್ಯಾಸ ನೀಡಿದರು. ವಿಜ್ಞಾನಿ ಆರ್.ಆರ್. ರಾವ್ ಅವರು  ಭಾರತದ ಸಸ್ಯವರ್ಗಗಳ ವೈವಿಧ್ಯತೆ, ಸಂರಕ್ಷಣೆ ಮತ್ತು ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ಯಾಮಲಾದೇವಿ ಸಮಾರೋಪ ಭಾಷಣ ಮಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ಲಕ್ಷ್ಮಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments