ಪಡಿತರ ಭಾವಚಿತ್ರ ತೆಗೆಸಲು ತೊಂದರೆ: ಆಕ್ರೋಶ
ಕನ್ನಡಪ್ರಭವಾರ್ತೆ ಅರಸೀಕೆರೆ ಮಾ. 21
ಪಡಿತರ ಚೀಟಿ ಹೊಸದಾಗಿ ಪಡೆಯಲು ಮತ್ತು ಹೆಸರನ್ನು ಸೇರ್ಪಡೆ ಮಾಡುವ ಸಂಬಂಧ ಭಾವಚಿತ್ರ ತೆಗೆಸಲು ಇಂಟರ್ನೆಟ್ ಮುಂದೆ ಪ್ರತಿದಿನ ಮಧ್ಯರಾತ್ರಿಯಿಂದಲೇ ಜನರು ಸಾಲಾಗಿ ನಿಂತು ಕಾಯ ಬೇಕಾಗಿದೆ. ಇಂತಹ ಅವ್ಯವಸ್ಥೆಗೆ ದೂಡಿದ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವ ದೃಶ್ಯ ಪಟ್ಟಣದಲ್ಲಿ ಇದೀಗ ಸಾಮಾನ್ಯವಾಗಿದೆ.
ಪಟ್ಟಣದಲ್ಲಿ ಕೇವಲ ಎರಡು ಇಂಟರ್ನೆಟ್ ಸೆಂಟರ್ಗಳಿಗೆ ಭಾವಚಿತ್ರ ತಗೆಯಲು ಅವಕಾಶ ನೀಡಿದ್ದು ಈ ಕೇಂದ್ರಗಳಲ್ಲಿ ದಿನಕ್ಕೆ ಕೇವಲ 20 ಫಲಾನುಭವಿಗಳ ಮಾಹಿತಿ ಮತ್ತು ಭಾವಚಿತ್ರ ತೆಗೆಯಲಾಗುತ್ತಿದ್ದು ದಿನವೂ ನೂರಾರು ಮಂದಿ ಸಾಲಿನಲ್ಲಿ ನಿಂತು ನಿರಾಶರಾಗಿ ಮನೆಗೆ ಹಿಂತಿರುಗುವಂತಾಗಿದೆ.
ಪಡಿತರ ಚೀಟಿದಾರರು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಹಾಗೂ ಪರಿಚಯಿಸಲು ಮತ್ತೊಬ್ಬ ಪಡಿತರ ಚೀಟಿದಾರರನ್ನು ಜೊತೆಯಲ್ಲಿ ಕರೆತಂದು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯ ದೃಶ್ಯವಾಗಿದೆ. ಎರಡು ಕೇಂದ್ರಗಳು ಮಹಡಿಯ ಮೇಲಿದ್ದು ವಯೋವೃದ್ಧರು ಮತ್ತು ಮಹಿಳೆಯರು ಹೆಚ್ಚು ಒತ್ತಡಗಳ ನಡುವೆ ಸಾಲಿನಲ್ಲಿ ನಿಲ್ಲಲಾಗದೇ ಪರಿತಪಿಸುತ್ತಿರುವುದು ನಿತ್ಯದ ನೋಟವಾಗಿದೆ.
ಹೆಚ್ಚಿನ ಕೇಂದ್ರಗಳನ್ನು ಪಟ್ಟಣದಲ್ಲಿ ತೆರೆಯಲು ಇನ್ನೂ ಅನೇಕ ಇಂಟರ್ನೆಟ್ ಸೆಂಟರ್ಗಳು ಪಟ್ಟಣದಲ್ಲಿದ್ದು ಇವುಗಳನ್ನು ಉಪಯೋಗಿಸಿ ಕೊಳ್ಳುವುದರ ಮೂಲಕ ಪಡಿತರದಾರರ ಬವಣೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ಗಮನಹರಿಸಬೇಕೆಂದು ಪಡಿತರದಾರರು ಒತ್ತಾಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.