ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬದುಕಿನ ವಿಕಾಸಕ್ಕೆ ಋತುಗಳ ಬದಲಾವಣೆ ಕಾರಣ: ಅಹಮದ್

Lingaraj Badiger
Updated On : 22 Mar 2013, 11:02 am

ಕನ್ನಡಪ್ರಭವಾರ್ತೆ,ಹಾಸನ,ಮಾ.21
ಮಾನವನ ಬದುಕಿನ ವಿಕಾಸಕ್ಕೆ ಭೂಮಿಯ ಋತು ಬದಲಾವಣೆಗಳೇ ಕಾರಣ ಎಂದು ಭಾರತ ಜ್ಞಾನ ವಿಜ್ಞಾನ  ಸಮಿತಿ ಜಿಲ್ಲಾ ಕಾರ್ಯದರ್ಶಿ ಎಚ್.ಎ. ಅಹಮದ್ ತಿಳಿಸಿದರು.ನಗರದ ಶಾಂತಿನಗರ ಬಿಜಿಎಸ್ ಘಟಕದಿಂದ ಮುಕ್ತ ಮಹಿಳಾ ಕಲಾ ಕುಟೀರದಲ್ಲಿ ಏರ್ಪಡಿಸಿದ್ದ ಅನಿಸಿಕೆ- ಅಭಿವ್ಯಕ್ತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಭೂಮಿಯು ಸೌರಪಥ ಹಾಗೂ ತನ್ನ ಅಕ್ಷಕ್ಕೆ 23.5 ಡಿಗ್ರಿ ವಾಲಿದ್ದು, ನಿರಂತರವಾಗಿ ತನ್ನ ಅಕ್ಷದ ಸುತ್ತ  ಹಾಗೂ ಸೂರ್ಯನಿಗೆ ಅಂಡಾಕಾರವಾಗಿ ಪ್ರದಕ್ಷಣೆ ಹಾಕುತ್ತಿರುವುದು ಹಾಗೂ ಸೂರ್ಯನಿಗೆ ಸಮ ಸಮಿತಿಯ ಉಷ್ಣ ಪ್ರವಲಯದ ದೂರದಲ್ಲಿರುವುದು ಕಾರಣ. ಹಾಗಾಗಿ ಸೂರ್ಯನ ಕಿರಣಗಳ ರಾಸಾಯನಿಕಗಳ ಪರಿಣಾಮ ಭೂಮಿಯ ಮೇಲೆ ನೈಸರ್ಗಿಕ ಬದಲಾವಣೆಗಳು ನಿರಂತರವಾಗಿ ಘಟಿಸುತ್ತಿವೆ. ಇದನ್ನು ಋತುಮಾನ ಎಂದು ಸರಳ ಭಾಷೆಯಲ್ಲಿ ಕರೆಯಲಾಗುತ್ತದೆ ಎಂದು  ವಿವರಿಸಿದರು.
 ಭೂವಿಜ್ಞಾನಿಗಳು, ಜೀವ ವಿಜ್ಞಾನಿಗಳು ಮತ್ತು ಹವಾಮಾನ ವಿಜ್ಞಾನಿಗಳು ಭೂಮಿಯ ಮೇಲೆ ಸೂರ್ಯನ ಶಕ್ತಿ ವರ್ಜನೆ ಅನುಸಾರ ಋತುಗಳನ್ನು ಲೆಕ್ಕಹಾಕಿದ್ದಾರೆ. ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವ ಪ್ರದೇಶಗಳು ಕ್ರಮವಾಗಿ ವರ್ಷದ 6 ತಿಂಗಳ ಸತತ ಹಗಲು ಹಾಗೂ 6 ತಿಂಗಳು ಸತತ ಕತ್ತಲೆ ಇರುತ್ತದೆ. ಹಾಗೂ ಕೇವಲ  ತೀವ್ರ ಬೇಸಗೆ ಕಾಲಗಳು ಮಾತ್ರ ಘಟಿಸುತ್ತವೆ ಎಂದು ವಿವರಿಸಿದರು.
 3000 ವರ್ಷಗಳ ಹಿಂದೆ ಯುಗಾದಿ ಸಂಕ್ರಮ ಏಪ್ರಿಲ್ 15 ನೇ ತಾರೀಖಿಗೆ ಬರುತ್ತಿತ್ತು. ಆದರೆ ಭೂಮಿಯ 3ನೇ ಚಲನೆಯ ಪರಿಣಾಮ ಇಂದು ಅದು ಮಾರ್ಚ್ 21ಕ್ಕೆ ಘಟಿಸುತ್ತಿದೆ. ಈ ಸತ್ಯವನ್ನು  ಭಾರತ ಮತ್ತು ಮುಸ್ಲಿಂ ರಾಷ್ಟ್ರಗಳು ಹೊರತು ಪಡಿಸಿ ಎಲ್ಲಾ ದೇಶಗಳು ಅರಿತು ತಮ್ಮ ಪಂಚಾಂಗಗಳನ್ನು ತಿದ್ದುಪಡಿ ಮಾಡಿ ಕೊಂಡಿವೆ. ಆದರೆ ನಾವೀಗ ಆಚರಿಸುತ್ತಿರುವ ಏಪ್ರಿಲ್ ನಿಗದಿ ಪಂಚಾಂಗ ಮತ್ತು ಏಪ್ರಿಲ್ ತಿಂಗಳ ಯುಗಾದಿ  ನಿಸರ್ಗ ಪೂರಕವಲ್ಲ ಎಂದು ತಿಳಿಸಿದರು.ಬಿಜಿಎಸ್ ಘಟಕದ ಅಧ್ಯಕ್ಷ ಸಾಹಿತಿ ದೇವರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement