ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತಪಟ್ಟಿ ದೋಷ ನಿವಾರಣೆಗೆ ಕ್ರಮ

Parashurama
Updated On : 21 Mar 2013, 11:10 am

ಕನ್ನಡಪ್ರಭವಾರ್ತೆ೤ ಹಾಸನ೤ ಮಾ. 21
ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ತಾಲೂಕು ಆಡಳಿತ ಸಜ್ಜುಗೊಂಡಿದ್ದು, ಹಾಸನ ತಾಲೂಕು ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು,  422 ಮತಗಟ್ಟೆ ಸ್ಥಾಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 2,74,865 ಮತದಾರರಿದ್ದು, ಈ ಪೈಕಿ 1,38,100 ಪುರುಷ ಮತದಾರರು ಮತ್ತು 1,37,238 ಮಹಿಳಾ ಮತದಾರರಿದ್ದಾರೆ.
ಹಾಸನ ತಾಲೂಕಿನ ದುದ್ದ, ಶಾಂತಿಗ್ರಾಮ ಹೊಳೆನರಸೀಪುರ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ್ದರೇ  ಕಟ್ಟಾಯ ಹೋಬಳಿಗೆ ಸಕಲೇಶಪುರ ಕ್ಷೇತ್ರಕ್ಕೆ ಒಳಪಡುತ್ತದೆ. ನಾಗರಿಕರು ಶಾಂತಿ, ಸುವ್ಯವಸ್ಥೆಯಿಂದ ಚುನಾವಣೆ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ 1,72,095 ಮತದಾರರಿದ್ದು, ಈ ಪೈಕಿ 86,029 ಪುರುಷ ಮತ್ತು 86,066 ಮಹಿಳಾ ಮತದಾರರಿದ್ದು, 258 ಮತಗಟ್ಟೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಳೆನರಸೀಪುರ ಕ್ಷೇತ್ರಕ್ಕೆ ಸೇರಿದ ಶಾಂತಿಗ್ರಾಮ ಮತ್ತು ದುದ್ದ ಹೋಬಳಿಯಲ್ಲಿ 74,814 ಮತದಾರರಿದ್ದು, ಈ ಪೈಕಿ 37,692 ಪುರುಷ ಮತ್ತು 37,172 ಮಹಿಳಾ ಮತದಾರರಿದ್ದಾರೆ.
ಹಾಸನ ತಾಲೂಕಿನ ಕಟ್ಟಾಯ ಹೋಬಳಿ ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಲಿದ್ದು, ಇಲ್ಲಿ 27,956 ಮತದಾರರಿದ್ದಾರೆ. ಈ ಪೈಕಿ 14,374 ಪುರುಷ ಮತ್ತು 14,050 ಮಹಿಳಾ ಮತದಾರರಿದ್ದಾರೆ. ಒಟ್ಟಾರೆಯಾಗಿ ಹಾಸನ ತಾಲೂಕಿನ ಮತದಾರರು ಈ ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರಿರುವುದರಿಂದ ತಾಲೂಕಿನಲ್ಲಿ 422 ಮತಗಟ್ಟೆಗಳ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ತಿಳಿಸಿದರು.
ಈವರೆಗೂ ಸೇರದೆ ಇರುವ: ವಿಧಾನಸಭಾ ಚುನಾವಣೆ ಸಂಬಂಧ ಮತದಾರರ ಪಟ್ಟಿಯಲ್ಲಿ ಈವರೆಗೂ ಹೆಸರು ಸೇರದೆ ಇರುವ ಮತದಾರರು ನಮೂನೆ-6ನ್ನು ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ, ಜನನ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರಗಳೊಂದಿಗೆ ಭರ್ತಿ ಮಾಡಿ ಸಲ್ಲಿಸಬಹುದು.
ಮೃತ, ಅನರ್ಹ ವಾಸವಿಲ್ಲದ ಮತದಾರರ ಹೆಸರು ನಮೂದುಗಳನ್ನು ಕೈಬಿಡಲು ನಮೂನೆ-7ನ್ನು, ನಮೂದುಗಳ ತಿದ್ದುಪಡಿಗಾಗಿ ನಮೂನೆ-8. ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸ್ಥಳಾಂತರವಾಗಿದ್ದರೆ, ನಮೂನೆ-8ಎ ನ್ನು ಸೂಕ್ತ ರೀತಿಯಲ್ಲಿ ಭರ್ತಿ ಮಾಡಿ ಸಮರ್ಥನೆಗಾಗಿ ಅವಶ್ಯಕ ದಾಖಲೆಗಳೊಂದಿಗೆ ಮತಗಟ್ಟೆಗಳಿಗೆ ನೇಮಕವಾಗಿರುವ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‌ಓ), ತಾಲೂಕು ಕಚೇರಿಗೆ, ಉಪ ವಿಭಾಗಾಧಿಕಾರಿ ಕಚೇರಿಗಳಿಗೆ, ಕಾಲೇಜು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ, ಬ್ಯಾಂಕ್, ಅಂಚೆ ಕಚೇರಿಯಲ್ಲಿನ ಡ್ರಾಪ್ ಬಾಕ್ಸ್‌ಗಳಿಂದ ಫಾರಂಗಳನ್ನು ತೆಗೆದುಕೊಂಡು ಭರ್ತಿ ಮಾಡಿ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಬೂತ್‌ಮಟ್ಟದಲ್ಲಿ:  ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ನಡೆಸುತ್ತಿದ್ದು, ಯಾವುದೇ ಮತದಾರರನ್ನು ತನ್ನ ಹಕ್ಕಿನಿಂದ ವಂಚಿತವಾಗದಂತೆ ಎಚ್ಚರವಹಿಸಲಾಗುತ್ತಿದೆ. ಈಗಾಗಲೇ ಬೂತ್ ಮಟ್ಟದಲ್ಲಿ ಅಧಿಕಾರಿ, ಸಿಬ್ಬಂದಿ ನಿಯೋಜಿಸಿ ಪರಿಶೀಲನೆ ನಡೆಸಲಾಗುತ್ತಿದೆ.
ಚುನಾವಣಾ ಅಕ್ರಮಗಳ ಬಗ್ಗೆ ನಂತರ ದೂರುವ ಬದಲು ಘಟನೆ ನಡೆಯುತ್ತಿರುವ ಸಂದರ್ಭದಲ್ಲೇ ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮ ವಹಿಸಲು ಅನುಕೂಲಕರ. ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಅತ್ಯಲ್ಪ ಕಾಲಾವಕಾಶವಿದ್ದ ಕಾರಣ ಸಾಧ್ಯವಾದ ಮಟ್ಟಿಗೆ ತೃಪ್ತಿಕರವಾಗಿ ಚುನಾವಣೆ ನಡೆಸಲಾಗಿದೆ. ಆದರೆ ವಿಧಾನ ಸಭಾ ಚುನಾವಣೆ ತಯಾರಿಗೆ ಸಾಕಷ್ಟು ಅವಧಿ ದೊರೆತಿದೆ ಯಾವುದೇ ಲೋಪಗಳಾಗದಂತೆ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ನುಡಿದರು.
ಚುನಾವಣೆಯಲ್ಲಿ ಪ್ರತಿ ಮತದಾರನಿಗೆ ಮನೆ ಮನೆಗೆ ತೆರಳಿಗೆ ಅಧಿಕಾರಿಗಳು ಮತ ಚೀಟಿಗಳನ್ನು ವಿತರಿಸುವರು. ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರದಿಂದ ನೀಡಲಾಗುವ ಚೀಟಿಯನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆ. ಜನಗಣತಿ ಆಧಾರದ ಮೇಲೆ ತಾಲೂಕಿನ ಕೆಲವು ಮತದಾರರ ಪಟ್ಟಿಯ ಲಿಂಗಾನುಪಾತದಲ್ಲಿ ವ್ಯತ್ಯಾಸಗಳಿದ್ದು ಅದನ್ನು ಅಧಿಕಾರಿಗಳು ಮತಗಟ್ಟೆವಾರು ಪರಿಶೀಲಿಸಲಿದ್ದಾರೆ ಎಂದು ಹೇಳಿದರು.
ಪರಿಷ್ಕರಣೆ ಕಾರ್ಯಕ್ಕೆ:  ಹಾಸನ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಉಸ್ತುವಾರಿ ಅದಿಕಾರಿಗಳ ನೇಮಕ ಹಾಸನ ಗ್ರಾಮಾಂತರ ಎಲ್ಲಾ ಬಿಎಲ್‌ಓ(ಮತಗಟ್ಟೆ ಅಧಿಕಾರಿ) ಅಧಿಕಾರಿಗಳು ನೇಮಕಗೊಂಡಿದ್ದು, ಉಸ್ತುವಾರಿ ಅಧಿಕಾರಿಯಾಗಿ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಚಿಕ್ಕೇಗೌಡ, ನೋಡಲ್ ಅಧಿಕಾರಿಯಾಗಿ ಶಿರಸ್ತೆದಾರರ ಆರ್.ರಾಜು ಮತ್ತು ಚುನಾವಣಾ ಶಾಖೆ ಅಧಿಕಾರಿಯಾಗಿ ಪ್ರಥಮ ದರ್ಜೆ ಸಹಾಯಕ ಕೋದಂಡರಾಮಶೆಟ್ಟಿ ದುದ್ದ ಹೋಬಳಿಯಲ್ಲಿ ಉಸ್ತುವಾರಿ ಅಧಿಕಾರಿಯಾಗಿ ಹೋಬಳಿಯ ರಾಜಸ್ವ ನಿರೀಕ್ಷಕ ರಾಮಣ್ಣ, ನೋಡಲ್ ಅಧಿಕಾರಿಯಾಗಿ ದುದ್ದ ನಾಡಕಚೇರಿ ಉಪತಹಸೀಲ್ದಾರ್ ಹಾಗೂ ಚುನಾವಣಾ ಶಾಖೆ ಅಧಿಕಾರಿ ಪ್ರಥಮ ದರ್ಜೆ ಸಹಾಯಕ ಬೋಜೇಂದ್ರಪ್ಪ.
ಕಟ್ಟಾಯ ಹೋಬಳಿಯ ಬಿಎಲ್‌ಓ ಅಧಿಕಾರಿಗಳಾದ ಉಸ್ತುವಾರಿ ಅಧಿಕಾರಿ ಹೋಬಳಿಯ ರಾಜಸ್ವ ನಿರೀಕ್ಷಕ ಹೊನ್ನೇಗೌಡ, ನೋಡಲ್ ಅಧಿಕಾರಿ ಉಪ ತಹಸೀಲ್ದಾರ್ ವಾಸು ಮತ್ತು ಚುನಾವಣಾ ಶಾಖೆ ಅಧಿಕಾರಿ ಗ್ರಾಮ ಲೆಕ್ಕಿಗ ಪ್ರವೀಣಕುಮಾರ್. ಸಾಲಗಾಮೆ ಹೋಬಳಿಯ ಬಿಎಲ್‌ಓ ಆಧಿಕಾರಿ ಉಸ್ತುವಾರಿ ಅಧಿಕಾರಿ ಹೋಬಳಿಯ ರಾಜಸ್ವ ನಿರೀಕ್ಷಕ ಮೋಕ್ಷಾನಂದ, ನೋಡಲ್ ಅಧಿಕಾರಿ ಉಪ ತಹಸೀಲ್ದಾರ್ ನಾಗರಾಜು ಮತ್ತು ಚುನಾವಣಾ ಶಾಖೆ ಅಧಿಕಾರಿ ದ್ವಿತೀಯ ದರ್ಜೆ ಸಹಾಯಕ ಜೆ.ಬಿ.ರೇಣುಕ.
ಶಾಂತಿಗ್ರಾಮ ಹೋಬಳಿಯ ಬಿಎಲ್‌ಓ ಅಧಿಕಾರಿ ಉಸ್ತುವಾರಿ ಅಧಿಕಾರಿ ಹೋಬಳಿಯ ರಾಜಸ್ವ ನಿರೀಕ್ಷಕ ಶಿವಕುಮಾರ್, ನೋಡಲ್ ಅಧಿಕಾರಿ ಉಪತಹಸೀಲ್ದಾರ್ ನಾಗರಾಜು ಮತ್ತು ಚುನಾವಣಾ ಶಾಖೆ ಅಧಿಕಾರಿ ದ್ವಿತೀಯ ದರ್ಜೆ ಸಹಾಯಕ ವಿ.ವಿನುತ, ಹಾಸನ ನಗರ ಮತಗಟ್ಟೆ ಸಂಖ್ಯೆ 109ರಿಂದ 172ಕ್ಕೆ ನಗರಸಭೆ ಸಹ ಸಿಬ್ಬಂದಿ, ನೋಡಲ್ ಅಧಿಕಾರಿಯಾಗಿ ನಗರಸಭೆಯ ರಾಜಸ್ವ ನಿರೀಕ್ಷಕ ಶಿವಕುಮಾರ್ ಮತ್ತು ಚುನಾವಣಾ ಶಾಖೆ ಅಧಿಕಾರಿಯಾಗಿ ದ್ವಿತೀಯ ದರ್ಜೆ ಸಹಾಯಕ ಯತೀಶ್, ಹಾಸನ ನಗರ ಮತಗಟ್ಟೆ ಸಂಖ್ಯೆ 173ರಿಂದ 234ಕ್ಕೆ ಉಸ್ತವಾರಿ ಅಧಿಕಾರಿ ನಗರಸಭೆ ಸಹ ಸಿಬ್ಬಂದಿ, ನೋಡಲ್ ಅಧಿಕಾರಿಯಾಗಿ ಮಾಸ್ಟರ್  ಉಬೇದುಲ್ಲಾ ಮತ್ತು ಚುನಾವಣಾ ಶಾಖೆ ಅಧಿಕಾರಿಯಾಗಿ ಪ್ರಥಮ ದರ್ಜೆ ಸಹಾಯಕ ರಂಗಸ್ವಾಮಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments