ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮುದ್ರಕರ ದಿನಾಚರಣೆ

Lingaraj Badiger
Updated On : 22 Mar 2013, 11:03 am

ಬೇಲೂರು: ಸಂಘಟನೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯ ಎಂದು ಶಾಸಕ ವೈ.ಎನ್. ರುದ್ರೇಶ್‌ಗೌಡ ಹೇಳಿದರು.
 ಜಿಲ್ಲಾ ಮುದ್ರಣಕಾರರ ಸಂಘದಿಂದ ಇಲ್ಲಿನ ವಿಷ್ಣು ರೀಜೆನ್ಸಿಯಲ್ಲಿ ಏರ್ಪಡಿಸಲಾಗಿದ್ದ ಮುದ್ರಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮುದ್ರಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಎಚ್ಚರಿಕೆಯಿಂದ ಕರ್ತವ್ಯ  ನಿರ್ವಹಿಸಬೇಕು ಎಂದು ಹೇಳಿ, ಜವಾಬ್ದಾರಿ ಹಾಗೂ ಜ್ಞಾನಕ್ಕೆ ಹೆಚ್ಚು ಮಹತ್ವ ಇರುವ ಕ್ಷೇತ್ರ ಇದಾಗಿದೆ ಎಂದರು.
 ಅಖಿಲ ಭಾರತ ಮುದ್ರಣಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಜನಾರ್ದನ್ ಮಾತನಾಡಿ ವೃತ್ತಿಯಲ್ಲಿ ಪರಿಣಿತರಾಗಲು ಮತ್ತು ಯುವ ಪೀಳಿಗೆಗೆ ಬೆಂಗಳೂರಿನಲ್ಲಿ ತರಬೇತಿ ನೀಡುತ್ತಿದ್ದು, ಸದ್ಯದಲ್ಲಿಯೇ ಪ್ರಿಂಟೆಕ್ ಪಾರ್ಕ್‌ನಲ್ಲಿ ವಸತಿಯೊಂದಿಗೆ ತರಬೇತಿ ಶಿಕ್ಷಣ ನೀಡಲು ಚಿಂತಿಸಿದೆ ಎಂದರು.
  ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಅಶೋಕ್‌ಕುಮಾರ್ ದೇಶದಲ್ಲಿ ಕೋಟಿ ಜನ ವೃತ್ತಿಯಲ್ಲಿದ್ದು, ರಾಜ್ಯದಲ್ಲಿ 12 ಸಾವಿರ ಜನರಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಸಂಘಟಿತರಾಗಿ ಸಮಸ್ಯೆಗಳನ್ನು  ಪರಿಹರಿಸಿಕೊಳ್ಳಲು ಮುಂದಾಗಬೇಕೆಂದು ತಿಳಿಸಿದರು. ರಾಜ್ಯದಲ್ಲಿ ಉತ್ತಮ ಸಂಘಟನೆಯಲ್ಲಿ ಹಾಸನ ಜಿಲ್ಲೆಯೂ ಒಂದಾಗಿದೆ ಎಂದು ಪ್ರಶಂಸಿಸಿದರು.
ಮುದ್ರಣ ಕ್ಷೇತ್ರದಲ್ಲಿ ಬದಲಾವಣೆ:   ಗೌರವ ಕಾರ್ಯದರ್ಶಿ ಸಿ.ಎನ್. ಮೋಹನ್‌ಕುಮಾರ್ ಮಾತನಾಡಿ ಮುದ್ರಣ ಕ್ಷೇತ್ರದಲ್ಲಿ ಬದಲಾವಣೆಗಳು ಸಾಕಷ್ಟು ಕಾಣುತ್ತಿದ್ದು, ಇದರ ಬಗ್ಗೆ ಸಂಘಟನೆಗಳು ಸದಸ್ಯರಿಗೆ ಮಾಹಿತಿ ನೀಡಲು ಮುಂದಾಗಬೇಕು. ವೃತ್ತಿಯಲ್ಲಿ ಹಿರಿಯರನ್ನು ಗುರುತಿಸಿ ಅಭಿನಂದಿ ಸುತ್ತಿರುವುದು   ಶ್ಲಾಘನೀಯವಾಗಿದೆ ಎಂದರು.
  ಬೇಲೂರು ಪುರಸಭೆ ಮಾಜಿ ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ ಮಾತನಾಡಿ ಮುದ್ರಣ ಕ್ಷೇತ್ರದಲ್ಲಿನ ತಮ್ಮ ಅನುಭವ ವಿವರಿಸಿ ವರ್ಷದಲ್ಲಿ ಒಂದು ದಿನ ಎಲ್ಲರೂ ಒಂದೆಡೆ ಸೇರಿ ಸಂತೋಷದಿಂದ ಪಾಲ್ಗೊಳ್ಳಬೇಕೆಂದರು.
  ಅಧ್ಯಕ್ಷತೆ ಜಿಲ್ಲಾ ಸಂಘದ ಅಧ್ಯಕ್ಷ ಬಿ.ಎಸ್. ಜಗದೀಶ್ ವಹಿಸಿದ್ದು, ಬೆಂಗಳೂರಿನ ಮಾದರಿಯಲ್ಲಿ  ಜಿಲ್ಲೆಯಲ್ಲಿ  ಮುದ್ರಣ ಶಿಕ್ಷಣ ತರಬೇತಿ ಕೇಂದ್ರ ಪ್ರಾರಂಭಿ ಬೇಕು. ಅದಕ್ಕಾಗಿ ನಿವೇಶನ ಪಡೆಯುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
  ಈ ಸಂದರ್ಭದಲ್ಲಿ  ವೃತ್ತಿಯಲ್ಲಿ ಹಿರಿಯರಾದ ನಿಡಗೋಡಿನ ಪೂಜಾ ಪ್ರಿಂಟರ್ಸ್‌ನ ರಾಜಕುಮಾರಸ್ವಾಮಿ ಹಾಗೂ ಹಾಸನದ ಬೈಂಡರ್ ರಾಜಣ್ಣಶೆಟ್ಟಿ ಮತ್ತು ತಿಮ್ಮಶೆಟ್ಟಿ (ಭೋಜಣ್ಣ) ಅವರನ್ನು ಸನ್ಮಾನಿಸಲಾಯಿತು.
  ಸಂಘದ ಕಾರ್ಯಚಟುವಟಿಕೆಗಳಿಗೆ ಹಾಸನ ನಗರಸಭೆಯಿಂದ ಆರ್ಥಿಕ ಸಹಾಯ ನೀಡಿದ ಪೌರಾಯುಕ್ತ ನಾಗಭೂಷಣ್ ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಲಾಯಿತು. ಬಿ.ಎಂ. ವೀರಾಜು ಸ್ವಾಗತಿಸಿದರು. ಪುಟ್ಟಣ ನಿರೂಪಿಸಿದರು. ಬೇಲೂರಿನ ಶ್ರೀವತ್ಸ  ವಂದಿಸಿದರು.
ನಗರಕ್ಕೆ ಶಿವರಾಮನ್
ಹಾಸನ: ನಗರದ ನಾದಾಮೃತ ಸಂಗೀತ ಕಲಾ ಪರಿಚಾರಕ ವೃಂದದ 6ನೇ ವಾರ್ಷಿಕೋತ್ಸವದ ಮೊದಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಂತಾರಾಷ್ಟ್ರೀಯ ಖ್ಯಾತಿಯ ಮೃದಂಗ ಮಾಂತ್ರಿಕ ಪದ್ಮವಿಭೂಷಣಉಮಯಾಳಪುರಂ ಶಿವರಾಮನ್ ಮಾ. 23 ರಂದು ಹಾಸನಕ್ಕೆ ಆಗಮಿಸಲಿದ್ದಾರೆ. ರಾಮಕೃಷ್ಣ ವಿದ್ಯಾಲಯ ಆವರಣದಲ್ಲಿ ಪಟ್ಟಾಭಿರಾಮ ಪಂಡಿತ್  ಗಾಯನ ಕಚೇರಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು  ಕುಮಾರಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement