ಒಬ್ಬನನ್ನೇ ವರಿಸಿದ ಅಕ್ಕ- ತಂಗಿ!
ಕನ್ನಡಪ್ರಭ ವಾರ್ತೆ, ಹಾಸನ. ಮಾ.25
ಅವನಿಗೋ ಅಕ್ಕನ ಮೇಲೆ ಲವ್ವು, ಅವಳ ತಂಗಿಯ ಮೇಲೆ ಜೀವ. ಅಕ್ಕ ತಂಗಿಗೂ ಹಾಗೇ. ಅವನಂದ್ರೆ ಪಂಚಪ್ರಾಣ. ಹೀಗಾಗಿ ಅವನು ಇಬ್ಬರಗೂ ಪಾಣಿಗ್ರಹಣ ಮಾಡಿದ್ದಾನೆ.
ಹೌದು. ಇಂತಹ ಅಚ್ಚರಿಯ ಘಟನೆ ನಡೆದಿದ್ದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಘಟ್ಟಹಳ್ಳಿಯಲ್ಲಿ. ಬೇಲೂರು ತಾಲೂಕಿನ ಹಳೇಬೀಡಿನ ಬಸವರಾಜ್ ಅಲಿಯಾಸ್ ರಂಗಸ್ವಾಮಿ ಎಂಬಾತ ಗೋಣಿಸೋಮನಹಳ್ಳಿ ಗ್ರಾಮದ ಅಕ್ಕ ತಂಗಿಯರಾದ ರೇಣುಕಾ ಮತ್ತು ಜ್ಯೋತಿಯರೊಂದಿಗೆ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಇಬ್ಬರಿಗೂ ಬಾಳು ನೀಡಿದ್ದಾನೆ. ಅಷ್ಟೇ ಅಲ್ಲ, ಈ ವಿವಾಹಕ್ಕೆ ಉಭಯ ಕುಟುಂಬದ ಒಪ್ಪಿಗೆಯೂ ಇದೆ.
ಬೆಂಗಳೂರಲ್ಲಿ ಬೇಕರಿ: ಬೆಂಗಳೂರಿನ ದಾಸರಹಳ್ಳಿಯಲ್ಲಿ ಬೇಕರಿ ನಡೆಸುತ್ತಿರುವ ಬಸವರಾಜು ಈ ಸಹೋದರಿಯರಿಗೆ ದೂರದ ಸಂಬಂಧಿ. ಹೀಗಾಗಿಯೇ ಈತ ಆಗಾಗ ಈ ಸಹೋದರಿಯರ ಮನೆಗೆ ಬರುತ್ತಿದ್ದ. ಈ ವೇಳೆ ಬಸವರಾಜ್ ಅಕ್ಕ ತಂಗಿಯರಿಬ್ಬರನ್ನೂ ಪ್ರೀತಿಸಲು ಶುರು ಮಾಡಿದ. ಈ ವಿಷಯ ಸಹೋದರಿಯರಿಗೆ ಮೊದಲೇ ತಿಳಿದಿತ್ತು. ನಂತರ ವಿಷಯ ಊರಿಗೆ ಹಬ್ಬಿದ ನಂತರ ಬಸವರಾಜ್ ಇಬ್ಬರಲ್ಲಿ ಒಬ್ಬರನ್ನು ಮದುವೆಯಾಗಲು ಸಿದ್ಧನಾದ.
ಆದರೆ, ರೇಣುಕಾ ಮತ್ತು ಜ್ಯೋತಿ ತಮ್ಮಿಬ್ಬರನ್ನೂ ವಿವಾಹವಾಗುವಂತೆ ಪಟ್ಟುಹಿಡಿದರು. ನಂತರ ಬಸವರಾಜ್ ಉಭಯ ಕುಟುಂಬಗಳ ಪೋಷಕರ ಅನುಮತಿ ಪಡೆದು ವಿವಾಹವಾಗಲು ಮುಂದಾದ. ಅದರಂತೆ ಆತ ಸೋಮವಾರ ವಿವಾಹವಾಗಿದ್ದು, ಅದಕ್ಕೆ ಅನೇಕರು ಸಾಕ್ಷಿಯಾಗಿದ್ದಾರೆ.
ಸುದ್ದಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ್ದ ಹಳೇಬೀಡು ಪೊಲೀಸರು ಹಿಂದೂ ವಿವಾಹ ಕಾಯ್ದೆ ಪ್ರಕಾರ 2 ಮದುವೆಯಾಗುವಂತಿಲ್ಲ ಎಂದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.