ಮನರಂಜನಾ ಪ್ರದರ್ಶನಕ್ಕೆ ಪ್ರಜ್ವಲ್ ರೇವಣ್ಣ ಚಾಲನೆ
ಕನ್ನಡಪ್ರಭ ವಾರ್ತೆ, ಹೊಳೆನರಸೀಪುರ, ಮಾ.25
ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಬಯಲು ರಂಗಮಂದಿರ ಮೈದಾನದ ಆವರಣದಲ್ಲಿ ಏರ್ಪಡಿಸಿರುವ ಮನರಂಜನಾ ಪ್ರದರ್ಶನವನ್ನು ಶಾಸಕ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರು ಭಾನುವಾರ ಉದ್ಘಾಟಿಸಿದರು.
ಈ ಬಾರಿ ವಿವಿಧ ಹೊಸ ಬಗೆಯ ಮನರಂಜನಾ ಪ್ರದರ್ಶನಗಳನ್ನು ಸೈಯದ್ ನೂರ್ ಅಹಮದ್ ಹಾಗೂ ಫಿತ್ತೂ ಷರೀಫ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಒಮ್ಮೆಲೆ 4 ಬೈಕ್ ಮತ್ತು 4 ಕಾರುಗಳು ಮರಣ ಬಾವಿಯಲ್ಲಿ ಸಾಹಸ ಪ್ರದರ್ಶನ ನೀಡುವ ರೈಡರ್ ಪ್ರದರ್ಶನ, ಕೊಲಂಬಸ್, ಬ್ರೇಕ್ ಡ್ಯಾನ್ಸ್ ಅಲ್ಲದೇ ಮಕ್ಕಳಿಗಾಗಿ ಆಟ ವೈವಿಧ್ಯಗಳನ್ನು ಏರ್ಪಡಿಸಲಾಗಿದೆ.
ಪ್ರದರ್ಶನ ಉದ್ಘಾಟಿಸಿದ ಪ್ರಜ್ವಲ್ ಅವರು ತಮ್ಮ ತಂದೆ ಎಚ್.ಡಿ.ರೇವಣ್ಣ ಹಾಗೂ ತಾಯಿ ಭವಾನಿ ಮತ್ತು ಸಹೋದರ ಸೂರಜ್ ಅವರೊಂದಿಗೆ ಕೆಲ ಕಾಲ ಆಟಗಳನ್ನು ವೀಕ್ಷಿಸಿದರು.
ತಮ್ಮ ಮಕ್ಕಳೊಂದಿಗೆ ಕೆಲವು ಪ್ರದರ್ಶನಗಳನ್ನು ವೀಕ್ಷಿಸಿದ ಎಚ್.ಡಿ.ರೇವಣ್ಣ ಹಾಗೂ ಭವಾನಿ ಅವರು ಮನರಂಜನಾ ವಸ್ತುಪ್ರದರ್ಶನಕ್ಕೆ ಪುರಸಭೆ ಹಾಗೂ ಆರಕ್ಷಕ ಇಲಾಖೆಯ ವತಿಯಿಂದ ಅಗತ್ಯ ಸಹಕಾರಗಳನ್ನು ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಚ್.ವಿ.ಪುಟ್ಟರಾಜು ಇತರರು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.