ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅದ್ದೂರಿ ಸದಾಶಿವಸ್ವಾಮಿ ರಥೋತ್ಸವ

Parashurama
Updated On : 26 Mar 2013, 9:54 am

ಕನ್ನಡಪ್ರಭವಾರ್ತೆ ನುಗ್ಗೇಹಳ್ಳಿ ಮಾ. 26
ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಸದಾಶಿವಸ್ವಾಮಿ ರಥೋತ್ಸವ ಭಕ್ತರ ಸಡಗರ ಸಂಭ್ರಮದ ನಡುವೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ಬುಧವಾರ ಪ್ರಾರಂಭಗೊಂಡ ಸಪ್ತಾಹ ಪೂರ್ವಕ ಶೈವಾಗಮ ರೀತ್ಯ ಉತ್ಸವಾದಿಗಳು ಸೇವಾಕರ್ತರಿಂದ ಪುಣ್ಯಾಹ, ಅಭಿಷೇಕ, ಗಣಪತಿ ಉತ್ಸವ, ಅಂಕುರಾರ್ಪಣ, ರಕ್ಷಾಬಂಧನ, ಧ್ವಜಾರೋಹಣ, ಭೇರಿತಾಡನ, ಸಿಂಹವಾಹನೋತ್ಸವ, ನಂದಿವಾಹನೋತ್ಸವ, ಶೇಷವಾಹನೋತ್ಸವ, ಕುದುರೆ ಉತ್ಸವ, ಕಲ್ಯಾಣೋತ್ಸವ ಪೂಜಾ ಕೈಂಕರ್ಯಗಳು ನೆರವೇರಿದವು. ರಥೋತ್ಸವ ಮುನ್ನ ಕೃಷ್ಣ ಗಂಧೋತ್ಸವ, ಮಂಟಪಡಿ ಸೇವೆಗಳು ಜರುಗಿದವು.
ನಂತರ ಸದಾಶಿವಸ್ವಾಮಿಯನ್ನು ಪುಷ್ಪಾಲಂಕೃತ ರಥದಲ್ಲಿ ಪ್ರತಿಷ್ಠಾಪನೆ ಮಾಡಿ ರಥಕ್ಕೆ ಮಹಾ ನೈವೇದ್ಯ ಮಾಡಿ ಮಹಾಮಂಗಳಾರತಿ ಸಲ್ಲಿಸಿದ ನಂತರ ಮಂಗಳವಾದ್ಯಗಳೊಂದಿಗೆ ಊರಿನ ರಥಬೀದಿಯಲ್ಲಿ ಭಕ್ತರು ಜಯಘೋಷ ನಡುವೆ ಸಂಭ್ರಮದಿಂದ ರಥವನ್ನು ಎಳೆದರು. ರಥ ಮುಂದಕ್ಕೆ ಚಲಿಸುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಪೀಠಾಧ್ಯಕ್ಷ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಎಂ.ಎ. ರಂಗಸ್ವಾಮಿ, ಕುಸಮಾ ಬಾಲಕೃಷ್ಣ, ಎಪಿಎಂಸಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೋಭ ರಾಜಶೇಖರ್, ಗ್ರಾಪಂ  ಮಾಜಿ ಅಧ್ಯಕ್ಷ  ಎಚ್.ಎಂ. ಗೋಪಾಲ್, ಸದಸ್ಯ ಮಂಜೇಗೌಡ, ಬಿ.ಆರ್.ಕುಮಾರಸ್ವಾಮಿ, ನಾಗೇಶ್, ಗ್ರಾಪಂ ಮಾಜಿ ಸದಸ್ಯ  ಎನ್.ಎಸ್.ಲಕ್ಷ್ಮಣ್, ಎನ್.ಡಿ. ಶಿವಪ್ಪ, ಎನ್.ಟಿ. ಸಿದ್ದಪ್ಪ, ಮುಂತಾದವರು ಪಾಲ್ಗೊಂಡಿದ್ದರು. ಎನ್.ಬಿ.ರವೀಶಾಚಾರ್ ಸಿಹಿ ವಿತರಿಸಿದರು. ಸ್ಥಳೀಯ ಸಂಘ ಸಂಸ್ಥೆಗಳ ಎಲ್ಲಾ ಸದಸ್ಯರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments