ದಾಳಿ: ವ್ಯಕ್ತಿಗೆ ಗಾಯ, ಚಿರತೆ ಸಾವು
ಕನ್ನಡಪ್ರಭವಾರ್ತೆ, ಹಾಸನ, ಮಾ 26
ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡರೆ, ತಪ್ಪಿಸಿಕೊಳ್ಳಲು ಬೀಸಿದ ಹೊಡತೆಕ್ಕೆ ಚಿರತೆಯೇ ಮೃತಪಟ್ಟ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ಮಂಗಳವಾರ ನಡೆದಿದೆ.
ಹೊಸಕೋಟೆ ಹೋಬಳಿಯ ಕಣಿವೆ ಬಸವನಹಳ್ಳಿಯ ಅಣ್ಣೇಗೌಡ ಎಂಬುವರ ಪುತ್ರ ಕೆ.ಎ.ಗೋಪಾಲ್ (45) ಚಿರತೆ ದಾಳಿಯಿಂದ ಗಾಯಗೊಂಡವರು. ಗೋಪಾಲ್ ತೋಟದಿಂದ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಕೈಕಾಲು ತೊಳೆಯುತ್ತಿದ್ದರು. ಆಗಲೇ ಮನೆಯೊಳಗೆ ಹೊಕ್ಕಿದ್ದ ಚಿರತೆ ದಿಢೀರ್ ಅವರ ಮೇಲೆ ದಾಳಿ ನಡೆಸಿತು. ದಾಳಿಯಿಂದ ತಪ್ಪಿಸಿಕೊಳ್ಳಲು ಚಿರತೆಗೆ ಕೈಗೆ ಸಿಕ್ಕಿದ್ದ ಕುಡುಗೋಲಿನಿಂದ ಗೋಪಾಲ್ ತಿವಿದಿದ್ದರು. ನಿತ್ರಾಣಗೊಂಡ ಚಿರತೆ ಸಮೀಪದ ಪೊದೆಯೊಂದರಲ್ಲಿ ಮಲಗಿತ್ತು. ಅರಣ್ಯ ಇಲಾಖೆಯವರು ಬಂದು ಪರೀಕ್ಷಿಸಿದಾಗ ಹೊಟ್ಟೆಯ ಭಾಗ ಕೊಳೆತ ಸ್ಥಿತಿಯಲ್ಲಿದ್ದ ಚಿರತೆ ಕೊನೆಯುಸಿರೆಳೆದಿತ್ತು. ಗೋಪಾಲ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಗೋಪಾಲ್ ಅವರ ಪುತ್ರನೊಬ್ಬ ಅಪಘಾತದಲ್ಲಿ ಮೃತರಾಗಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಚಿರತೆ ದಾಳಿ ನಡೆದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.