ನೀರಿನದ್ದೇ ನೂರಾರು ದೂರು!
ಚಿಕ್ಕಗಡಿಯಾರದಿಂದ ಎಡಭಾಗ, ದೇವರಾಜ ಅರಸು ರಸ್ತೆ, ರಾಮಸ್ವಾಮಿ ವೃತ್ತ, ಕಾವೇರಿ ವಸತಿಗೃಹ, ರಮಾವಿಲಾಸ ರಸ್ತೆ, ಬನುಮಯ್ಯ ವೃತ್ತದ ಮೂಲಕ ಚಿಕ್ಕಗಡಿಯಾರದವರೆಗಿನ ವ್ಯಾಪ್ತಿ ಹೊಂದಿರುವ ಈ ವಾರ್ಡ್‌ನಲ್ಲಿ ಒಳ ಚರಂಡಿ ಮತ್ತು ಸ್ವಚ್ಛತೆಯದ್ದೆ ಪ್ರಮುಖ ಸಮಸ್ಯೆ. ಒಳಚರಂಡಿಗಳು ತುಂಬಿ ಹರಿಯುವುದಲ್ಲದೆ, ಅನೇಕ ಮನೆಗಳಿಗೂ ನುಗ್ಗುತ್ತಿದೆ. ಪ್ರತಿದಿನ ಸುಮಾರು 10 ರಿಂದ 15 ದೂರುಗಳು ಬರುತ್ತದೆ. ಈ ಭಾಗದಲ್ಲಿ ಸ್ವಚ್ಛತೆ ಸಮಸ್ಯೆ ಹೆಚ್ಚಾಗಿದೆ. ಉಳಿದಂತೆ ನೀರಿನ ಸಮಸ್ಯೆ ಇದ್ದೆ ಇದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮುಂದೆ ನೀರು ಮತ್ತು ಒಳಚರಂಡಿಗೆ ಆದ್ಯತೆ ನೀಡುತ್ತೇನೆ.
ಅರಮನೆ ಉತ್ತರ ದ್ವಾರದ ಡಾ. ರಾಜ್‌ಕುಮಾರ್ ಪಾರ್ಕ್, ಬೆಂಗಳೂರು - ನೀಲಗಿರಿ ರಸ್ತೆ, ಪೈಲೆಟ್ ವೃತ್ತ, ಅಶೋಕ ರಸ್ತೆ 18ನೇ ಕ್ರಾಸ್, ಕೆ.ಟಿ. ರಸ್ತೆ, ಗಾಂಧಿ ಚೌಕ ಮತ್ತು ದೊಡ್ಡ ಗಡಿಯಾರ ವ್ಯಾಪ್ತಿ ಹೊಂದಿರುವ ಈ ವಾರ್ಡ್‌ನಲ್ಲಿ ನೀರು ಮತ್ತು ಒಳಚರಂಡಿ ಸಮಸ್ಯೆ ಇದೆ. ಅತಿ ಹೆಚ್ಚು ಸಿನಿಮಾ ಮಂದಿರಗಳು, ಹೊಟೇಲ್‌ಗಳು, ವಸತಿ ಗೃಹಗಳು ಮತ್ತು ವಾಣಿಜ್ಯ ಮಳಿಗೆಗಳು ಇರುವ ಈ ಪ್ರದೇಶದಲ್ಲಿ ಕಾವೇರಿ ನೀರು ಸರಿಯಾಗಿ ಸಿಗುವುದಿಲ್ಲ. ಸುಮಾರು 30- 40 ವರ್ಷಗಳಷ್ಟು ಹಳೆಯದಾದ ಒಳಚರಂಡಿಗಳು ಜನಸಂಖ್ಯೆಯ ಒತ್ತಡಕ್ಕೆ ನಲುಗಿ ಹೋಗಿವೆ. ವಾರ್ಡ್ ವ್ಯಾಪ್ತಿಗೆ ಒಳಪಡುವ ಒಂದು ಭಾಗದ ರಾಜಮಾರ್ಗ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ.
ಮಂಡಿಮೊಹಲ್ಲಾ, ಇರ್ವಿನ್ ರಸ್ತೆ, ಕೆ.ಆರ್. ಆಸ್ಪತ್ರೆ ವೃತ್ತ, ಆರ್‌ಎಂಸಿ ವೃತ್ತ, ಸಾಡೆ ರಸ್ತೆ, ಅಕ್ಬರ್ ರಸ್ತೆ, ಚಿಕ್ಕಮಾರುಕಟ್ಟೆ, ಕಬೀರ್ ರಸ್ತೆ, ಶ್ರೀ ಚಿತ್ರಮಂದಿರ ವ್ಯಾಪ್ತಿ ಒಳಪಡುವ ಈ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೆಲವು ಕಡೆಗೆ ಕಾವೇರಿ ನೀರು ಸರಬರಾಜಾದರೆ ಹಲವು ಕಡೆಗೆ ಬೋರ್‌ವೆಲ್ ನೀರು ಪೂರೈಕೆಯಾಗುತ್ತದೆ. ಅಲ್ಲದೆ 3 ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ. ಉಳಿದಂತೆ ಒಳಚರಂಡಿ ವ್ಯವಸ್ಥೆ ಹೆಚ್ಚಾಗಿದೆ. ತೀರ ಹಳೆಯದಾದ ಪೈಪ್‌ಲೈನ್ ಇರುವುದರಿಂದ ಇದು ಸಾಮಾನ್ಯವಾಗಿದೆ. ಅಲ್ಲದೆ, ರಸ್ತೆ ಸಮಸ್ಯೆ ಹೆಚ್ಚಾಗಿದೆ. ಈ ಎಲ್ಲಾ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡುತ್ತೇನೆ.
ಮಿಷನ್ ಆಸ್ಪತ್ರೆ ವೃತ್ತ, ಪುಲಕೇಶಿ ರಸ್ತೆ, ಕೈಲಾಸಪುರಂ, ಚಿಕ್ಕಮಾರುಕಟ್ಟೆ, ಅಕ್ಬರ್ ರಸ್ತೆ ಮತ್ತು ಬೆಂಕಿ ನವಾಬ ರಸ್ತೆ ವ್ಯಾಪ್ತಿ ಒಳಪಡುವ ಈ ವಾರ್ಡ್‌ನಲ್ಲಿ ಮೋರಿ ಮತ್ತು ಶೌಚಾಲಯ ಸಮಸ್ಯೆ ಹೆಚ್ಚಾಗಿದೆ. ಅಲ್ಪಸಂಖ್ಯಾತರೆ ಹೆಚ್ಚು ವಾಸಿಸುವ ಈ ಭಾಗದಲ್ಲಿ ಮೋರಿಗಳು ಕಬ್ಬು ನಾರುತ್ತಿವೆ. ಇವುಗಳನ್ನು ಸ್ವಚ್ಛಗೊಳಿಸುವುದು ಪ್ರಮುಖ ಆದ್ಯತೆಯ ವಿಷಯ. ಇನ್ನು ಅನೇಕ ಮನೆಗಳಲ್ಲಿ ಶೌಚಾಲಯವೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಒಳಚರಂಡಿಯೂ ತುಂಬಿ ಹರಿಯುವುದು ಸಾಮಾನ್ಯವಾಗಿದೆ. ಆದ್ದರಿಂದ ಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಗಮನ ನೀಡುತ್ತೇನೆ.
ಪುಲಕೇಶಿ ರಸ್ತೆ, ಅಶೋಕರಸ್ತೆ 18ನೇ ಕ್ರಾಸ್, ಕೆ.ಟಿ. ರಸ್ತೆ, ದೋಬಿ ಘಾಟ್, ಪ್ರಿನ್ಸ್ ರಸ್ತೆಯ ಬಹು ಸಂಕೀರ್ಣವಾದ ಈ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಇನ್ನು ಕಿರಿದಾದ ಇಲ್ಲಿನ ರಸ್ತೆಗಳ ಅಭಿವೃದ್ಧಿ ಆಗಬೇಕಿದೆ. ಒಳಚರಂಡಿ ಸಮಸ್ಯೆ ಹೇಳಲಾಗದು. ತೀರಾ ಹಳೆಯದಾದ ಇಲ್ಲಿನ ಪೈಪ್‌ಲೈನ್ ಬಹಳ ಕಿರಿದಾದ್ದರಿಂದ ನೀರು ಮ್ಯಾನ್‌ಹೋಲ್ ಮೂಲಕ ಹೊರ ಬರುತ್ತದೆ. ಇಲ್ಲಿನ ನಿಜಾಮಿಯಾ ಶಾಲೆಯನ್ನು ಪದವಿ ಪೂರ್ವ ಕಾಲೇಜು ಮಟ್ಟಕ್ಕೆ ವಿಸ್ತರಿಸುವ ಉದ್ದೇಶ ಇದೆ. ಮುಖ್ಯವಾಗಿ ನೀರಿನ ಸಮಸ್ಯೆ ಮತ್ತು ಒಳಚಂರಡಿ ಸಮಸ್ಯೆಗೆ ಹೆಚ್ಚಿನ ಗಮನ ನೀಡುತ್ತೇನೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.