ಸಿದ್ಧಗಂಗಾ ಶ್ರೀ ಜನ್ಮ ದಿನಾಚರಣೆ ಪ್ರಯುಕ್ತ ಪೂರ್ವಭಾವಿ ಸಭೆ
ಕ.ಪ್ರ.ವಾರ್ತೆ ಹಾಸನ ಮಾ. 26
ಸಿದ್ಧಗಂಗಾ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಪರಮ ಶಿವಯೋಗಿ, ಪರಿಪೂರ್ಣ ಯೋಗಿ, ಶುದ್ಧ ಸಾತ್ವಿಕ ಯೋಗಿ, ನಡೆದಾಡುವ ದೇವರು, ಕಲಿಯುಗ ಬಸವಣ್ಣ ಶಿವಯೋಗಿ ಸಿದ್ದಗಂಗಾ ಶಿವಯೋಗಿ ನನ್ನ ಗುರು ನಮ್ಮ ದೇವರು ಎಂದು ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ ರಾಜ್ಯಾಧ್ಯಕ್ಷ ಎಂ. ಶಿವಲಿಂಗಯ್ಯ ಶಾಸ್ತ್ರಿ ಬಣ್ಣಿಸಿದರು.
ಕೊಣನೂರು ಹೋಬಳಿ ಕೆಸವತ್ತೂರು ಸಿದ್ದಲಿಂಗೇಶ್ವರ ಮಠದ ಆವರಣದಲ್ಲಿ ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ, ನಾನಾ ಸಂಘಗಳು ಹಾಗೂ ಸಮಾಜ ಭಾಂದವರು ಸೇರಿ ಏಪ್ರಿಲ್ 8 ರಂದು ಸಿದ್ಧಗಂಗಾ ಶ್ರೀ ಜನ್ಮ ದಿನಾಚರಣೆ ಆಚರಿಸುವ ಪ್ರಯುಕ್ತ ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿದ್ದಗಂಗಾ ಮಠದಲ್ಲಿ ವಿದ್ಯಾಭಾಸ ಮಾಡಿದ್ದರಿಂದಲೇ ನಾವು ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದರು.
ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಆಶೀವರ್ಚನ ನೀಡಿ ಸದ್ಧುಗದ್ದಲವಿರದ ಸಾಧನೆ, ಗದ್ದುಗೆ ಏರಿರುವ ಸಿದ್ದಗಂಗೆ ಶ್ರೀಗಳ ಜನ್ಮ ದಿನಾಚರಣೆ ಪ್ರತಿವರ್ಷ ಅಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಅರಕಲಗೂಡು ತಾಲೂಕು ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ ಗೌರವ ಅಧ್ಯಕ್ಷ ಬೂದನೂರು ಕಾಂತರಾಜು, ಅಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೊಣನೂರು ಪುಟ್ಟಸ್ವಾಮಿ, ಸದಸ್ಯ ಕೆ.ಬಿ. ವೀರಪ್ಪಾಜಿ, ಕುಭೇರ, ಮಹೇಶ್, ಗ್ರಾಪಂ ಉಪಾಧ್ಯಕ್ಷ ನಿಂಗರಾಜು, ಡೈರಿ ಮುತ್ತಣ್ಣ, ಶಿವಲಿಂಗಪ್ಪಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.