ಹಾಸನ: ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಗಮನ ಸೆಳೆಯಲು ಪರಭಾಷೆ ನಟರನ್ನು ಕನ್ನಡ ನಾಡಿಗೆ ಕರೆತಂದು ಬೇರೆ ಭಾಷೆಯಲ್ಲಿ ಭಾಷಣ ಮಾಡಿಸಿ ಮತಯಾಚಿಸಿದರೆ ಕರವೇ ಕಾರ್ಯಕರ್ತರಿಂದ ಅಂತಹ ವೇದಿಕೆ ಮೇಲೆ ಕಲ್ಲು ಬೀಳಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎನ್.ನಾರಾಯಣಗೌಡ ಎಚ್ಚರಿಕೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ.5 ರಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಗಮನ ಸೆಳೆಯಲು ಪರಭಾಷೆ ನಟರನ್ನು ಕನ್ನಡನಾಡಿಗೆ ಕರೆಸಿ ಭಾಷಣ ಅವರ ತಾಯಿಭಾಷೆಯಲ್ಲಿ ಮಾತನಾಡುವುದು ಕಂಡು ಬಂದರೆ ಕರವೇ ಕಾರ್ಯಕರ್ತರು ವೇದಿಕೆ ಮೇಲೆ ಕಲ್ಲು ತೂರಲಿದ್ದಾರೆ. ಪರಭಾಷಾ ನಟರನ್ನು ಕರೆಸುವ ಮೂಲಕ ರಾಷ್ಟ್ರೀಯ ಪಕ್ಷಗಳು ಕನ್ನಡಕ್ಕೆ ಅವಮಾನ ಮಾಡುತ್ತಿವೆ ಎಂದು ಆರೋಪಿಸಿದರು. ಕರವೇ ಜಿಲ್ಲಾಧ್ಯಕ್ಷ ರವೀಂದ್ರಕುಮಾರ್ ಇತರರು ಇದ್ದರು.