ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಪಾರ ಭೌಗೋಳಿಕ ಸಂಪತ್ತು ಬಳಸಿ ರಾಜ್ಯ ಮಾದರಿಯಾಗಲಿ

Rashmi Kasaragodu
Updated On : 1 Nov 2013, 11:32 am

ಆಲೂರು: ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ದಾರಿಯಲ್ಲಿ ಕನ್ನಡಿಗರಾದ  ನಾವೆಲ್ಲರು ನಡೆದಾಗ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆಗೆ ನಿಜವಾದ   ಮೌಲ್ಯ ದೊರೆಯುತ್ತದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು.
 ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 58ನೇ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡನಾಡು ಅಪಾರವಾದ ಭೌಗೋಳಿಕ ಸಂಪತ್ತನ್ನು ಹೊಂದಿದೆ ಈ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಂಡು ರಾಜ್ಯ ಪ್ರಪಂಚಕ್ಕೆ ಮಾದರಿಯಾಗುವಂತೆ ಮಾಡುವಲ್ಲಿ ನಾವೆಲ್ಲರು ಮುನ್ನಡೆಯಬೇಕು ಎಂದರು.
 ಹರಿದು ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿ ಬಾಷ ಪ್ರಾಂತ್ಯಗಳಿಗೆ ಅನುಸಾರವಾಗಿ ರಾಜ್ಯಗಳ ನಿರ್ಮಾಣ ಮಾಡುವಲ್ಲಿ ವಲ್ಲಭಬಾಯಿ ಪಟೇಲರ ಪಾತ್ರ ಅವಿಸ್ಮರಣೀಯ. ಅವರ ಹಾಗೂ ನಮ್ಮ ಪೂರ್ವಿಕರ ಹೋರಾಟದ ಫಲವಾಗಿ ನಿರ್ಮಾಣಗೊಂಡ ಅಖಂಡ ಕರ್ನಾಟಕವನ್ನು ಮುನ್ನಡೆಸಿಕೊಂಡು ಹೋಗುವ ಕೆಲಸ ಕೇವಲ ಸರ್ಕಾರದ್ದಲ್ಲ ಅದು ನಮ್ಮ ನಿಮ್ಮೆಲ್ಲರ ಹೊಣೆ ಎಂದು ಹೇಳಿದರು.
 ಹಿಂದಿನ ಸಾಹಿತ್ಯದ ಗುಣಗಾನವನ್ನು ಮಾತ್ರ ಮಾಡದೆ ಹೊಸಾ ಸಾಹಿತ್ಯ ಬೆಳೆಸುವಂತಾಗಬೇಕು ಸಾಹಿತ್ಯದ ಮೂಲಕ ಶಾಂತಿ ನೆಮ್ಮದಿ ಬೆಳೆಸಿ ನಾಡಿನ ಹಿರಿಮೆ ಎಲ್ಲರಿಗೂ ತಿಳಿಯುವಂತೆ ಮಾಡಬೇಕೆಂದರು.
 ತಾಪಂ   ಅಧ್ಯಕ್ಷೆ ಯಶೋಧ ಹರೀಶ್ ಮಾತನಾಡಿ, ಸರ್ಕಾರಿ ಸವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಕನ್ನಡ ನಾಡು ನುಡಿಯನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದ ಅವರು, ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿರುವುದಕ್ಕೆ ಬೆಸರ ವ್ಯಕ್ತಪಡಿಸಿದರು.
 ಕಸಾಪ ಮಾಜಿ ಅಧ್ಯಕ್ಷ ಪುಟ್ಟೇಗೌಡ ಮಾತನಾಡಿ,  ಸರ್ಕಾರ ಖಾಸಗಿ ಶಾಲೆಯವರಿಗೆ ಮಾನ್ಯತೆ ನೀಡುತ್ತಿರುವುದರಿಂದಾಗಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ ಸರ್ಕಾರಿ ಶಾಲೆಗಳಿಗೂ ಖಾಸಗಿ ಶಾಲೆಗಳಲ್ಲಿರುವಂತೆ ಮೂಲಭೂತ ಸೌಕರ್ಯ ಅಥವಾ ಸರ್ಕಾರಿ ಶಾಲೆಗಳನ್ನೆ ಖಾಸಗೀಕರಣಗೊಳಿಸಿ ಇಲ್ಲವೇ ಖಾಸಗಿ ಶಾಲೆಗಳನ್ನೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿದ ಅವರು,  ಸರ್ಕಾರ ಇದೇ ರೀತಿ ಇಬ್ಬಗೆ ನೀತಿ ಅನುಸರಿಸಿದರೆ ಕನ್ನಡದ ಉಳಿವು ಅಸಾಧ್ಯವೆಂದರು. ತಹಸಿಲ್ದಾರ್ ಶಾರದಾಂಬ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಾನಾ  ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ತಾಲೂಕಿನ ಗಣ್ಯರನ್ನು ಈ ಸಂದರ್ಭದಲ್ಲಿಸನ್ಮಾನಿಸಲಾಯಿತು.
  ಕಸಾಪ  ಅಧ್ಯಕ್ಷ ಗುಲಾಮ್ಸತ್ತಾರ್, ಕೆ.ಎಸ್. ಮಂಜೇಗೌಡ, ಪಪಂ ಸದಸ್ಯರಾದ ಜಾಫರ್, ಜಯಣ್ಣ, ಮಂಜು, ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ  ವರದರಾಜ್, ಹನುಮಂತೇಗೌಡ, ಸುಬ್ಬಶೆಟ್ಟಿ, ಡಾ.ಜಯರಾಜ್, ಶಂಕರಾಚಾರ್, ರಂಗಯ್ಯ, ಬಸವರಾಜ್, ಇ.ಓ. ಚಂದ್ರಶೇಖರ್, ವಾಸುದೇವ, ವಿಜಯಕಾಂತ್, ಎ.ಇ.ಇ. ಶಿವಕುಮಾರ್  ಇತರರಿದ್ದರು. ಬಿಇಓ ಎಚ್.ಕೆ. ಪುಷ್ಪಲತಾ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement