ದಿಡಗದಲ್ಲಿ ಸಂಘಟನೆಗಳಿಂದ ರಾಜ್ಯೋತ್ಸವ
ಹಿರೀಸಾವೆ: ದಿಡಗದಲ್ಲಿ ಶುಕ್ರವಾರ ನಾನಾ ಸಂಘಟನೆಗಳಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಬ್ಬಮ್ಮ, ತಾಪಂ ಮಾಜಿ ಉಪಾಧ್ಯಕ್ಷ ಎಸ್.ರಾಜು, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಬಿ.ರಘುರಾಮ್, ಗ್ರಾಪಂ ಸದಸ್ಯ ಕೆ.ಟಿ.ನಾಗರಾಜು ಮತ್ತು ಸಂಘ, ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು.
ಮುಖಂಡ ಡಿ.ಕೆ.ಶಿವಪ್ಪ ಮಾತನಾಡಿ, ಎಲ್ಲರೂ ಒಗ್ಗೂಡಿ ಮಾತೃಭಾಷೆ ಕನ್ನಡ ನಾಡು ನುಡಿಯ ಏಳ್ಗೆಗಾಗಿ ಶ್ರಮಿಸೋಣ ಎಂದರು. ದಿಡಗಾದಿಂದ ಹಿರೀಸಾವೆಗೆ ಎರಡು ವರ್ಷಗಳಿಂದ ಯಾವುದೇ ಬಸ್ ಸಂಪರ್ಕ ಇರಲಿಲ್ಲ. ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಇಂದಿನಿಂದ ಇಲಾಖೆ ಬಸ್ ಸಂಪರ್ಕ ಕಲ್ಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.