ದೀಪ ಉರುಳಿಸಿದ ಇಲಿ: ಸಿಡಿದ ಸ್ಟವ್
ಹಾಸನ: ಕುವೆಂಪುನಗರ ಬಡಾವಣೆಯಲ್ಲಿ ಬುಧವಾರ ರಾತ್ರಿ 10 ಗಂಟೆ ಸಮಯದಲ್ಲಿ ದುರ್ಗಾ ಪರಮೇಶ್ವರಿ ಮೆಸ್ನಲ್ಲಿ ದೇವರ ಫೋಟೋ ಮುಂದಿರಿಸಿದ್ದ ದೀಪವನ್ನು ಇಲಿ ಬೀಳಿಸಿದ ಪರಿಣಾಮ ಕೆಳಗಿದ್ದ ಸೀಮೆಎಣ್ಣೆ ಸ್ಟವ್ ಮೇಲೆ ದೀಪ ಬಿದ್ದು ಸ್ಟವ್ ಸಿಡಿದಿದೆ. ಸ್ಟವ್ ಸಿಡಿದ ಶಬ್ದ ಕೇಳಿ ಮಲಗಿದ್ದ ಜನರು ಗಾಬರಿಯಿಂದ ಹೊರಗಡೆ ಬಂದು ನೋಡಿದರು.
ಕ್ಯಾನಿನಲ್ಲಿ ಸೀಮೆಎಣ್ಣೆ ಇದ್ದ ಪರಿಣಾಮ ಧಗಧಗನೆ ಉರಿಯ ಲಾರಂಭಿಸಿತು. ಆತಂಕಗೊಂಡ ನಾಗರಿಕರು 10-45ಕ್ಕೆ ಅಗ್ನಿಶಾಮಕಕ್ಕೆ ದೂರು ನೀಡಿದಾಗ ತಕ್ಷಣ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ಸಿದ್ದೇಗೌಡ ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗುವುದನ್ನು ತಪ್ಪಿಸಿದರು.
ಘಟನೆಯಲ್ಲಿ ಮೆಸ್ನಲ್ಲಿದ್ದ ಅಡುಗೆ ಪದಾರ್ಥಗಳು, ಹಿಂಬಾಗಿಲು ಭಸ್ಮವಾಗಿವೆ. ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಘಟನೆಯಿಂದ ಹೆಚ್ಚಿನ ನಷ್ಟವುಂಟಾಗಿದೆ ಎಂದು ಮೆಸ್ ಮಾಲಿಕ ಶ್ರೀನಿವಾಸ್ ತಿಳಿಸಿದ್ದಾರೆ.
ಕೆ.ಆರ್.ಪುರಂ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.