ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾಲಕ- ಬಾಲಕಿಯರ ಕರಾಟೆ ಸ್ಪರ್ಧೆ

Rashmi Kasaragodu
Updated On : 1 Nov 2013, 11:30 am

ಆಲೂರು: ಪ್ರಸಕ್ತ ಸಾಲಿನ 14 ಮತ್ತು 17 ವರ್ಷ ವಯೋವುತಿಯ ಬಾಲಕ -ಬಾಲಕಿಯರ ನೇರ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯನ್ನು ನ.7ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮನ್ಸೂರ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಮನ್ಸೂರ ಅರೇಬಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳು ಬೆಳಗ್ಗೆ 9ಕ್ಕೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪುಷ್ಪಲತಾ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯಿಂದ ನಿಗದಿಪಡಿಸಿದ ಗುರುತು ಪತ್ರವನ್ನು ಶಾಲಾ ಮುಖ್ಯಸ್ಥರು ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಿಂದ ದೃಢೀಕರಿಸಿ ತರಬೇಕು. ವಿವರಕ್ಕೆ ಮೊ. 84533 81664 ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement