ಜಿಲ್ಲಾ ದಸಂಸ ನೂತನ ಪದಾಧಿಕಾರಿಗಳ ಆಯ್ಕೆ
ಕ.ಪ್ರ.ವಾರ್ತೆ ಹಾಸನ ನ.3
ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಚಳುವಳಿಯ ಹಿರಿಯ ನಾಯಕ ಎಚ್.ಕೆ. ಸಂದೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ದಸಂಸ ಪುನಶ್ಚೇತನ ಸಭೆ ನಡೆದು, ಅಡಹಾಕ್ ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಜಿಲ್ಲಾ ಸಂಚಾಲಕರಾಗಿ ನಾರಾಯಣದಾಸ್, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಎಚ್.ಕೆ. ಸಂದೇಶ್, ಟಿ.ಆರ್. ವಿಜಯಕುಮಾರ್, ಎಚ್.ಎಂ. ಪ್ರಕಾಶ್, ಚೌಡವಳ್ಳಿ ಜಗದೀಶ್. ಜಿಲ್ಲಾ ಸಮಿತಿಯ ಸದಸ್ಯರುಗಳಾಗಿ ಅಣಚಿಹಳ್ಳಿ ಟಿ. ವೀರಭದ್ರಪ್ಪ, ಡಿ.ಕೆ. ಶಿವಕುಮಾರ್, ಮಹಾದೇವಅತ್ನಿ, ಜಿ.ಆರ್. ಹೇಮರಾಜ್, ಸಕಲೇಶಪುರ ಕಾಡಪ್ಪ, ಆರ್. ಮರಿ ಜೋಸೇಫ್, ಅರಸೀಕೆರೆ ಬಿ.ಎನ್. ರಂಗನಾಥ್, ಚನ್ನರಾಯಪಟ್ಟಣದ ನೇರಲಕೆರೆ ಮಂಜಣ್ಣ, ಕುಮಾರ್, ಕುರುವಂಕ, ಗ್ರಾಮದ ಕುಮಾರ್, ಬೇಲೂರಿನ ದೊರೆಸ್ವಾಮಿ ಮತ್ತು ಎಂ.ಜಿ. ವೆಂಕಟೇಶ್, ಪೆನ್ಷನ್ ಮೊಹಲ್ಲದ ಎಚ್. ದೇವರಾಜ್, ಅಂಬೇಡ್ಕರ್ ನಗರದ ಡಿ. ರಮೇಶ್, ಎಸ್. ಪಾಪಣ್ಣ, ಸಿದ್ದಯ್ಯ ನಗರದ ಅಂಗಡಿ ದೇವರಾಜಣ್ಣ, ಎಚ್.ಆರ್. ಯೋಗೀಶ್, ಎಚ್.ಆರ್. ಹರಿಪ್ರಸಾದ್, ಎಚ್.ಎಂ. ಪ್ರಭಾಕರ್, ಟಿ. ಶೇಖರ್, ನಿರ್ಮಲ, ನಗರದ ಸೋಮು, ಶಾಂತಿನಗರದ ಧರಣಿ, ಮಾಜಿ ಗ್ರಾಪಂ ಸದಸ್ಯ ಪ್ರಸನ್ನ ಮೂರ್ತಿ ಮತ್ತು ಕಾನೂನು ಸಲಹೆಗಾರರಾಗಿ ಯುವ ವಕೀಲ ಕ್ರಾಂತಿ ತ್ಯಾಗಿ ಇವರನ್ನು ಜಿಲ್ಲಾ ಸಮಿತಿ ಸದಸ್ಯರಾಗಿ ನೇಮಿಸಲಾಯಿತು.