ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೈಕ್ ಡಿಕ್ಕಿ - ಪಾದಚಾರಿ ಸಾವು

Mainashree
Updated On : 3 Nov 2013, 9:48 am

ಚನ್ನರಾಯಪಟ್ಟಣ: ಬೈಕ್ ಡಿಕ್ಕಿ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ತಾಲೂಕಿನ ಮಲ್ಲವನಘಟ್ಟ ಗ್ರಾಮದ ಮಂಜೇಗೌಡ ಗೇಟ್ ಬಳಿಯಿಂದ ಮನೆಗೆ ಹೋಗಲು ಬಿ.ಎಂ.ರಸ್ತೆಯ ಹತ್ತಿರ ಬಂದಾಗ ಗ್ರಾಮದ ದೇವರಾಜೇಗೌಡ (50) ಎಂಬುವರು ಸ್ವಲ್ಪ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬೆಂಗಳೂರು ಕಡೆಯಿಂದ ಬಂದ ಬೈಕ್ ಚಾಲಕನ ನಿರ್ಲಕ್ಷ್ಯತೆಯಿಂದ ದೇವರಾಜೇಗೌಡ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಅವರ ಮುಖಕ್ಕೆ ತಲೆಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ದೇವರಾಜೇಗೌಡ ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿ ಮಂಜೇಗೌಡ  ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement