ಯುವಕರಿಗೆ ಕಂಪ್ಯೂಟರ್ ತರಬೇತಿ
ಹಾಸನ: ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಗೆ ಕಂಪ್ಯೂಟರ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹಾಸನಾಂಬ ಇನಿಸ್ಟಿಟ್ಯೂಟ್ ಫಾರ್ ಹೈಯರ್ ಎಜುಕೇಶನ್, ಕುವೆಂಪು ಸರ್ಕಲ್, ಶಕ್ತಿಗಣಪತಿ ದೇವಸ್ಥಾನದ ಪಕ್ಕ, ಕುವೆಂಪುನಗರ, ಹಾಸನ ಇಲ್ಲಿ ಅರ್ಜಿ ಪಡೆದು ನ.11 ರೊಳಗೆ ಸಲ್ಲಿಸುವುದು. ಆದಾಯ ಮಿತಿ ಲಕ್ಷ ರು. ದೊಳಗಿಬೇಕು. ಎಸ್ಸೆಸ್ಸೆಲ್ಸಿ ಅಥವಾ ಹೆಚ್ಚಿನ ವಿದ್ಯಾಭ್ಯಾಸದ ಅಂಕಪಟ್ಟಿ, ಹಾಗೂ ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗೂ ಇತ್ತೀಚಿನ 4 ಭಾವಚಿತ್ರಗಳ ಜತೆ ಸಲ್ಲಿಸಬೇಕು. ಅಭ್ಯರ್ಥಿಗಳ ವಯೋವುತಿ 16 ರಿಂದ 35 ವರ್ಷದೊಳಗಿರಬೇಕು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಇರುವುದಿಲ್ಲ. ತರಬೇತಿ 2 ಮತ್ತು 3 ತಿಂಗಳು ನಡೆಯುತ್ತದೆ.