ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಮಂತ್ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

Mainashree
Updated On : 3 Nov 2013, 10:58 am

ಹಾಸನ: ಬೆಂಗಳೂರಿನ ಬಸವನಗುಡಿ ಮತ್ತು ಜಯನಗರದ ಈಜುಕೊಳದಲ್ಲಿ ಸಾರ್ವಜನಿಕ ಶಿಕ್ಷಣ  ಇಲಾಖೆ ವತಿಯಿಂದ ನಡೆದ ಈಜು ಹಾಗೂ ಡೈವಿಂಗ್ ಸ್ಪರ್ಧೆಯಲ್ಲಿ ನಗರದ ವಿಜಯ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶಮಂತ್  ಒಂದು ಮೀಟರ್ ಮತ್ತು 3 ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿಯ ಪದಕ ಪಡೆದು ಡಿಸೆಂಬರ್‌ನಲ್ಲಿ ಪೂನಾದಲ್ಲಿ ನಡೆಯಲಿರುವ ಎಸ್.ಜಿ.ಎಫ್.ಐ ರಾಷ್ಟ್ರ ಮಟ್ಟದ ಸ್ಪರ್ಧೆ ಆಯ್ಕೆ ಯಾಗಿದ್ದಾರೆ.  ನಗರಸಭೆಯ ಈಜು ಕೊಳದ ತರಬೇತುದಾರ ಲಕ್ಷ್ಮೀಕಾಂತ ಇವರಲ್ಲಿ  ತರಬೇತಿ ಪಡೆಯುತ್ತಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವತಿಯಿಂದ ಇತ್ತೀಚೆಗೆ ನಡೆದ  ಜಿಲ್ಲಾ ಮಟ್ಟದ ಯುವ ಜನೋತ್ಸವ ಆಶುಭಾಷಣ (ಆಂಗ್ಲಭಾಷೆ) ಸ್ಪರ್ಧೆಯಲ್ಲಿ ನಗರದ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕಿ ಪುನೀತಾಹೆನ್ರಿ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ  ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement