ಎನ್ಡಿಆರ್ಕೆ ಕಾಲೇಜಿಗೆ ದ್ವಿತೀಯ ಬಹುಮಾನ
ಹಾಸನ: ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ನಾಟಕ ಸ್ಪರ್ಧೆ ಹಾಗೂ ರಂಗತೋರಣದ ರಂಗಶೋಭಯಾತ್ರೆಯಲ್ಲಿ ಹಾಸನದ ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಬೀದಿ ನಾಟಕ ಪ್ರದರ್ಶಿಸಿದ ತಂಡ ರಂಗ ಶೋಭಾಯಾತ್ರೆಯಲ್ಲಿ ದ್ವಿತೀಯ ಬಹುಮಾನ ಪಡೆಯಿತು. ಬಳ್ಳಾರಿಯ ಜೋಳದ ರಾಶಿ ದೊಡ್ಡನಗೌಡ ನಾಟಕೋತ್ಸವದಲ್ಲಿ ವಿದ್ಯಾರ್ಥಿಗಳು ಗೊರೂರು ಅನಂತರಾಜು ವಿರಚಿತ ವೀರಪ್ಪನ್ ಭೂತ ನಾಟಕ ಪ್ರದರ್ಶಿಸಿದರು. ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿಗಳಾದ ಎಸ್.ಗೌತಮ್, ಡಿ.ಎಸ್.ಗೋಪಾಲ್, ಮಣಿಕಂಠ ಜೆ.ಆರ್. ರಾಮು, ಪಿ.ಪವನ್ ಸಂಪತ್, ಲೋಕೇಶ್ ಅವರನ್ನು ಕಾಲೇಜಿನ ಪ್ರಾಂಶುಪಾಲ ಶ್ಯಾಮ್ಭಟ್, ಉಪನ್ಯಾಸಕ ಡಾ.ನೀಲಕಂಠಮನ್ವಾಚಾರ್, ಎಚ್.ಎಸ್.ನಿಂಗಪ್ಪ, ಎಚ್.ಕೆ.ಜಯರಾಂ ಹಾಗೂ ಸಾಹಿತಿ ಗೊರೂರು ಅನಂತರಾಜು ಅವರನ್ನು ಅಭಿನಂದಿಸಿದ್ದಾರೆ.