ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಪ್ರಾರಂಭ
ಹಾಸನ: ಜಿಲ್ಲಾ ನೆಹರು ಯುವ ಕೇಂದ್ರ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ನಾನಾ ವಿಷಯಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಾರಂಭಿಸಿದೆ.
ದೀರ್ಘಾವಧಿ ತರಬೇತಿ ಅನ್ವಯ ಅರಸೀಕೆರೆಯ ರಾಜೇಶ್ವರಿ ಮಹಿಳಾ ಹೊಲಿಗೆ ಸಮಾಜ, ಅರಸೀಕೆರೆಯ ನುಗ್ಗೆಹಳ್ಳಿ ಗ್ರಾಮದ ಹೇಮಾವತಿ ಮಹಿಳಾ ಸಮಾಜ. ಹೊಳೆನರಸೀಪುರದ ಪ್ರೇಮ ಮಹಿಳಾ ಸಮಾಜ. ಸಕಲೇಶಪುರ ತಾಲೂಕು ಹೆತ್ತೂರು ಗ್ರಾಮದ ಸಹನಾ ಮಹಿಳಾ ಸಮಾಜ. ಬೇಲೂರಿನ ನೆಹರು ನಗರದ ಆದರ್ಶ ಮಹಿಳಾ ಮಂಡಳಿ. ಹೊಳೆನರಸೀಪುರದ ಶ್ರೀಧ್ವನಿ ಮಹಿಳಾ ವಿವಿದ್ದೋದೇಶ ಮಹಿಳಾ ಸಂಘ ಹಾಗೂ ಹಾಸನದ ದೇವೇಗೌಡ ನಗರದ ಸ್ನೇಹಾ ಮಹಿಳಾ ಮಂಡಳಿಯಲ್ಲಿ 3 ತಿಂಗಳ ಉಚಿತ ಹೊಲಿಗೆ ತರಬೇತಿಯನ್ನು ಪ್ರಾರಂಭಿಸಲಾಗಿದೆ.
ಅಲ್ಪಾವಧಿ ತರಬೇತಿಯ ಅನ್ವಯ ಅರಸೀಕರೆಯ ಮುಕ್ಕಣ್ಣೇಶ್ವರಿ ಮಹಿಳಾ ಮಂಡಳಿ ಮತ್ತು ವೈಭವ ಮಹಿಳಾ ಮಂಡಳಿ ಹಾಗೂ ಹಾಸನದ ತೇಜೂರು ಗ್ರಾಮದ ಡಾ. ಅಂಬೇಡ್ಕರ್ ಯುವಕ ಸಂಘದಲ್ಲಿ 2 ತಿಂಗಳ ಉಚಿತ ಕಸೂತಿ, ನಿಟ್ಟಿಂಗ್ ಹಾಗೂ ಕ್ಯಾಂಡಲ್ ತಯಾರಿಕ ತರಬೇತಿಯನ್ನು ಪ್ರಾರಂಭಿಸಲಾಗಿದೆ. ಆಸಕ್ತರು ಸಂಬಂದಪಟ್ಟ ಮಹಿಳಾ ಮಂಡಳಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಯನ್ನು ಭೇಟಿ ಮಾಡಿ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.