ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಾಯಿ ಹತ್ಯೆಗೈದ ಪುತ್ರನ ಬಂಧನ

Rashmi Kasaragodu
Updated On : 5 Nov 2013, 12:17 pm

ಹಾಸನ: ತಾಯಿಯನ್ನೇ ಕೊಲೆ ಮಾಡಿದ್ದ ಆರೋಪಿ ಪುತ್ರನನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸನ ಎಂ.ಹೊಸಕೊಪ್ಪಲಿನ ಹತ್ತಿರದ ಕೈಗಾರಿಕಾ ಪ್ರದೇಶದ ಬಯೋಪಾಸ್ ಫ್ಯಾಕ್ಟರಿ ಹತ್ತಿರದ ನಿವಾಸಿ ಲಕ್ಷ್ಮಮ್ಮ ಎಂಬುವರನ್ನು ನ.1ರಂದು ಭರ್ಬರವಾಗಿ ಕೊಲೆ ಮಾಡಿದ್ದ ಪುತ್ರ ಪಾಪೇಗೌಡ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
 ಆರೋಪಿ ಪಾಪೇಗೌಡ ಕೊಲೆಗೀಡಾದ ಲಕ್ಷ್ಮಮ್ಮರವರ 2ನೇ ಪುತ್ರನಾಗಿದ್ದು, ಸಾಲಕೋಸ್ಕರ ನಿವೇಶನ ಮಾರಾಟ ಮಾಡಲು ನಿವೇಶನ ಕೊಡದಿದ್ದರಿಂದ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಲು ಜಿಲ್ಲಾ ಎಸ್ಪಿ ರವಿ ಡಿ.ಚೆನ್ನಣ್ಣನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿ, ಹಾಗೂ ಉಪ ವಿಭಾಗದ ಡಿವೈಎಸ್ಪಿ ಪರಮೇಶ ಎಚ್. ಬೀಮಕ್ಕನವರ್ ಮಾರ್ಗದರ್ಶನದಲ್ಲಿ ಎಸ್ಐ ಎಚ್.ಬಿ.ಸಂಜೀವೇಗೌಡ, ನಗರ ಠಾಣಾ  ಪಿಎಸ್ಐ ಮಹೇಶ್, ಸಿಬ್ಬಂದಿ ಕೃಷ್ಣ, ಲಕ್ಷ್ಮಣೇಗೌಡ  ಕಾರ್ಯಾಚರಣೆ ನಡೆಸಿದರು. ಆರೋಪಿಯನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಟ್ಯಾಂಕರ್ ಡಿಕ್ಕಿ - ಸವಾರ ಸಾವು
ಹಾಸನ: ಟ್ಯಾಂಕರ್ ಲಾರಿಯೊಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಅರಸೀಕೆರೆಯಲ್ಲಿ ಇತ್ತೀಚೆಗೆ ನಡೆದಿದೆ. ತಾಲೂಕಿನ ಗಂಡಸಿ ಹೋಬಳಿ, ಬಿಲ್ಲೇನಹಳ್ಳಿ ನಾಗರಾಜು (35) ಸಾವನ್ನಪ್ಪಿದ ದುರ್ದೈವಿ. ನಾಗರಾಜು ಬೈಕ್ನಲ್ಲಿ  ಮುದುಡಿ ಗ್ರಾಮದ ಕೊಲ್ಲಾಪುರದಮ್ಮ ದೇವಸ್ಥಾನದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಆಯಿಲ್ ಲಾರಿ ಚಾಲಕನ ನಿರ್ಲಕ್ಷ್ಯತೆಯಿಂದ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ  ಗಾಯವಾಗಿದ್ದ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಡಸಿ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement