ನುರಿತ ಲೆಕ್ಕ ಪರಿಶೋಧಕರ ಕೊರತೆ: ಡಾ. ಮಹಾದೇವಪ್ಪ
ಆಲೂರು: ವಾಣಿಜ್ಯಶಾಸ್ತ್ರದಲ್ಲಿ ಲೆಕ್ಕ ಶಾಸ್ತ್ರದ ಕಲಿಕೆ ಮಹತ್ವ ಹೆಚ್ಚಿನದಾಗಿದ್ದು, ನುರಿತ ಲೆಕ್ಕಗಾರರ ಕೊರತೆಯನ್ನು ದೇಶ ಎದುರಿಸುತ್ತಿದೆ ಎಂದು ಹಾಸನ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಬಿ.ಮಹಾದೇವಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾಗತೀಕರಣದಿಂದ ಬಂಡವಾಳದ ಹರಿವು, ತಾಂತ್ರಿಕ ನೆರವು ಸಂಪನ್ಮೂಲಗಳ ಹಂಚಿಕೆ ಲಾಭ ಹಾಗೂ ಉದ್ದಿಮೆಯ ಬೆಳವಣಿಗೆ ಎಲ್ಲವೂ ಸುಲಭವಾಗಿದೆ. ಆದರೆ ಎಲ್ಲಾ ದೇಶಗಳಲ್ಲಿನ ಕಂಪೆನಿಗಳಿಗೆ ತಮ್ಮ ಹಣಕಾಸಿನ ವರದಿಗಳನ್ನು ಅದರ ಬಳಕೆದಾರರಿಗೆ ನೀಡುವಾಗ ಯಾವ ದೇಶದ ಲೆಕ್ಕಶಾಸ್ತ್ರ ಮಟ್ಟದ ವಿಧಾನವನ್ನು ಅನುಸರಿಸುವುದು ಎಂಬ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಪೂರಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಉಚ್ಛಮಟ್ಟದ ಲೆಕ್ಕಶಾಸ್ತ್ರ ವಿಧಾನವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ವೇದಿಕೆ ಸಂಚಾಲಕ ಎಚ್.ಎನ್.ಹರೀಶ್ ಮಾತನಾಡಿದರು.