ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಲಾ, ಕಾಲೇಜುಗಳಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ

Rashmi Kasaragodu
Updated On : 5 Nov 2013, 12:14 pm

ಜಾವಗಲ್: ಹೋಬಳಿಯಾದ್ಯಂತ ಎಲ್ಲಾ ಶಾಲಾ ಕಾಲೇಜು ಮತ್ತು ಸಂಘಸಂಸ್ಥೆ ಹಾಗೂ ಗ್ರಾಮಪಂಚಾಯಿತಿ ಕಚೇರಿಗಳಲ್ಲಿ 58ನೇ ಕನ್ನಡರಾಜ್ಯೋತ್ಸವವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್ಗೌಡ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮೀರವಿಶಂಕರ್ ಮಾತನಾಡಿ ಮಾತೃಭಾಷೆ ಕನ್ನಡವನ್ನು ಸಂಪೂರ್ಣವಾಗಿ ಆಡಳಿತ ಭಾಷೆಯನ್ನಾಗಿ ಜಾರಿಗೆ ತರಬೇಕೆಂದರು. ನಾಡು ನುಡಿ, ನೆಲ ಜಲ ರಕ್ಷಣೆಗಾಗಿ ಪ್ರತಿ ಕನ್ನಡಿಗನೂ ಶ್ರಮಿಸಬೇಕೆಂದರು.
 ಮುಖ್ಯ ಶಿಕ್ಷಕ ಎಚ್.ಆರ್. ಶಿವಣ್ಣ, ಕೆ.ಎಸ್. ಸುರೇಶ್ ಮಾತನಾಡಿದರು. ಮಕ್ಕಳ ಮನೆ ಸಮಿತಿ ಅಧ್ಯಕ್ಷ ಜೆ.ಎಚ್. ಶ್ರೀನಿವಾಸ್, ಶಿಕ್ಷಕ ಹಾಲಪ್ಪ, ಧರ್ಮಪ್ಪ, ಸರಸ್ವತಿ, ಸರ್ವಮಂಗಳ, ನಾಗರತ್ನ, ಪಲ್ಲವಿ, ಶೈಲಾ, ಭಾಗವಹಿಸಿದ್ದರು.
 ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಸಿನೆಡುವ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಪನ್ಯಾಸಕ ಶ್ರೀನಿವಾಸ್ ಮಾತನಾಡಿ ಕನ್ನಡ ಭಾಷೆ ಪುರಾತನ ಭಾಷೆಗಳಲ್ಲಿ ಒಂದಾಗಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಕನ್ನಡ ಅಕ್ಷರಗಳ ಸ್ಪಷ್ಟ ಉಚ್ಚಾರಣೆ ಮತ್ತು ಕನ್ನಡವನ್ನು ಚೆನ್ನಾಗಿ ಮಾತನಾಡುವುದನ್ನು ಶಿಕ್ಷಕರು ಕಲಿಸಬೇಕು ಎಂದರು.
 ಪ್ರಾಂಶುಪಾಲ ವಸಂತರಾಜ್ಅರಸ್ ಮಾತನಾಡಿ, ರಾಜ್ಯೋತ್ಸವ ಆಚರಣೆ ನವೆಂಬರ್1 ಮತ್ತು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರದೆ ಪ್ರತಿ ಕನ್ನಡಿಗನ ಮನೆಯಲ್ಲೂ ನಾಡಹಬ್ಬವನ್ನಾಗಿ ಆಚರಿಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.
ಉಪ ಪ್ರಾಂಶುಪಾಲ ಯೋಗೀಶ್ ಮಾತನಾಡಿ ಕನ್ನಡ ಭಾಷಾಭಿಮಾನ ಬೆಳಸಿಕೊಂಡು ಅನ್ಯಭಾಷೆಗಳನ್ನು ಗೌರವಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
 ಉಪನ್ಯಾಸಕ ಶಿವಲಿಂಗಯ್ಯ, ಅಧ್ಯಾಪಕ  ಪುಟ್ಟಶಂಕರಪ್ಪ, ಮರುಳಸಿದ್ದಪ್ಪ, ಚಂದ್ರೇಗೌಡ, ಶಿವಲಿಂಗಮೂರ್ತಿ ಮಾತನಾಡಿದರು.
 ಎಸ್ಡಿಎಂಸಿ ಅಧ್ಯಕ್ಷ ಜೆ.ವಿ. ರುದ್ರೇಶ್ ಆಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಮತ್ತುಅಧ್ಯಾಪಕ ವರ್ಗದವರು ಇದ್ದರು. ಜಾವಗಲ್ ಗ್ರಾಪಂ ಕಚೇರಿಯಲ್ಲಿ ಆಧ್ಯಕ್ಷೆ ಕವಿತಾಮಂಜುನಾಥ್ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಂದೂರು ಸ.ಹಿ.ಪ್ರಾ.ಶಾಲೆ, ಜಾವಗಲ್ ಕನ್ನಡಮಾತಾ, ಇಂದಿರಾಸ್ಮಾರಕ, ಶ್ರೀನಿಧಿ, ಉರ್ದು ಶಾಲೆ, ಮಾಡೆಲ್ಶಾಲೆ, ಎಸ್.ಕೆ ಕಾನ್ವೆಂಟ್, ವಿದ್ಯಾನಿಕೇತನ,ಅಂಬೇಡ್ಕರ್ ಪ್ರೌಢಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement