ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಲಿಂಗಕಾಮಿಗಳ ಸೆರೆ

Rashmi Kasaragodu
Updated On : 5 Nov 2013, 12:14 pm

ಕ.ಪ್ರ.ವಾರ್ತೆ   ಹಾಸನ   ನ.4
ಸಲಿಂಗಕಾಮದಲ್ಲಿ ತೊಡಗಿದ್ದ ಮಕ್ಕಳ ತಜ್ಞ ವೈದ್ಯ ಸೇರಿದಂತೆ 13 ಆರೋಪಿಗಳನ್ನು ನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಇದರೊಂದಿಗೆ ಹಾಸನ ನಗರದಲ್ಲಿ ನಡೆಯುತ್ತಿದ್ದ ಸಲಿಂಗಕಾಮ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.ಬಂಧಿತ ವೈದ್ಯನ ಹೆಸರು ಎಚ್.ಕೆ.ಪಾಲಾಕ್ಷ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ನೇತೃತ್ವದ ತಂಡ, ಈ ಆರೋಪಿಗಳನ್ನು ಬಂಧಿಸಿತು. ಹೀಗಿದ್ದಾಗ್ಯೂ, ಪ್ರಮುಖ ಆರೋಪಿ ಸುನೀಲ್ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ಮಹಾರಾಜ ಪಾರ್ಕ್ ಹಾಗೂ ಹಳೇ ಹೈಸ್ಕೂಲು ಮೈದಾನದಲ್ಲಿ ಸಲಿಂಗಕಾಮ ಚಟುವಟಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಪೊಲೀಸರು ದಾಳಿ ನಡೆಸಿದ್ದರು. ವೈದ್ಯ ಪಾಲಾಕ್ಷ ಅವರು ತವರು ಚಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ಅನಾಥ ಮಕ್ಕಳನ್ನು ದತ್ತು ಪಡೆಯುವ ಮತ್ತು ಮಕ್ಕಳಿಲ್ಲದವರಿಗೆ ದತ್ತು ನೀಡುವ ಕೆಲಸವನ್ನೂ ಮಾಡುತ್ತಿದ್ದರು. ಇವರು ನಡೆಸುತ್ತಿದ್ದ ಟ್ರಸ್ಟ್ನಲ್ಲಿ ಸಾಕಷ್ಟು ಅನಾಥ ಮಕ್ಕಳು ಆಶ್ರಯ ಪಡೆಯುತ್ತಿರುವುದರಿಂದ ಸಾರ್ವಜನಿಕರು ಅಲ್ಲಿರುವ ಮಕ್ಕಳನ್ನು ವಾಪಸ್ ಪಡೆದು ಸುರಕ್ಷಿತ ಜಾಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಅನುಮಾನವಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ತೀವ್ರ ಗೊಳಿಸಿದ್ದಾರೆ. ಈ ಮಧ್ಯೆ ಬಂಧಿತರ ಪೈಕಿ ಕೆಲವರು ನಾವೇನೂ ತಪ್ಪು ಮಾಡಿಲ್ಲ ಎನ್ನುತ್ತಿದ್ದಾರೆ.
ಇವರು ಬಂಧಿತರು: ಮಕ್ಕಳ ತಜ್ಞ ಹಾಗೂ ತವರು ಚಾರಿಟಬಲ್ ಟ್ರಸ್ಟ್ನ ಡಾ.ಎಚ್.ಕೆ.ಪಾಲಾಕ್ಷ (45), ದೊಡ್ಡಕೊಂಡಗೊಳದ ರೇವಣ್ಣ (30), ಶ್ರೀನಗರದ ಫಾಜಿಲ್ (30), ಹೊಳೆನರಸೀಪುರದ ವಿಶ್ವನಾಥ್ (35), ಚಿಕ್ಕಬಸದಿಯ ಉಮಾಶಂಕರ್ (30), ಚಿಕ್ಕನಾಳದ ತಖರೇಜ್ ಅಲಿಯಾಸ್ ಜಖೀಉಲ್ಲಾ (23), ಆನಂದ್ಕುಮಾರ್ (40), ಹರಳಹಳ್ಳಿಯ ಹೇಮಂತ್ಕುಮಾರ್ (22), ಚಿಕ್ಕಬಸದಿ ರಸ್ತೆಯ ನಾಗೇಶ್ (27), ಪಿಡಬ್ಲ್ಯೂಡಿ ಕಾಲೋನಿಯ ಜಯಕೀರ್ತಿ (38), ಗಾಣೀಗೆರೆ ಬೀದಿಯ ಪ್ರಶಾಂತ (28) ಮತ್ತು ಸತ್ಯಮಂಗಲದ ಪವನ್ (26) ಬಂಧಿತರು. ಪ್ರಮುಖ ಆರೋಪಿ ಸುನೀಲ್ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement