ಆಲೂರಿನಲ್ಲಿಂದು ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ
ಆಲೂರು: ಪಟ್ಟಣದ ಮನ್ಸೂರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನ.7 ರಂದು ಬೆಳಗ್ಗೆ 10ಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೇರ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಮುನಾವರ್ಪಾಷ ತಿಳಿಸಿದ್ದಾರೆ. ಕ್ರೀಡಾಪಟುಗಳು ಬೆಳಗ್ಗೆ 9ಕ್ಕೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪುಷ್ಪಲತಾ ತಿಳಿಸಿದ್ದಾರೆ.
14 ವರ್ಷ ವಯೋವುತಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು 5 ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2000ರ ಜ.1 ರ ನಂತರ ಜನಿಸಿರಬೇಕು. 17 ವರ್ಷ ವಯೋವುತಿಯ.ಲ್ಲಿ ಭಾಗವಹಿಸುವ ಪ್ರೌಢಶಾಲಾ ಕ್ರೀಡಾಪಟುಗಳು 1997ರ ಜ.1ರ ನಂತರ ಜನಿಸಿರಬೇಕು ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯಿಂದ ನಿಗದಿಪಡಿಸಿದ ಗುರುತು ಪತ್ರವನ್ನು ಶಾಲಾ ಮುಖ್ಯಸ್ಥರು ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಿಂದ ದೃಢೀಕರಿಸಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಕೆ.ನಾಗರಾಜು, ದೈಹಿಕ ಶಿಕ್ಷಣ ಪರಿವೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಆಲೂರು, ಮೊ. 8453381664 ಸಂಪರ್ಕಿಸಬಹುದಾಗಿದೆ.