ಜನನಾಯಕರಿಗೆ ಕಾಳಜಿ ಇಲ್ಲ: ಜಗದೀಶ್
ಬೇಲೂರು: ಕನ್ನಡ ನಾಡು ನುಡಿ ಬಗ್ಗೆ ಕನಿಷ್ಠ ಕಾಳಜಿ ಜನನಾಯಕರಿಗೆ ಇಲ್ಲ ಎಂದು ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್ ಟೀಕಿಸಿದರು. ಬೇಲೂರು ಪ್ರವಾಸಿ ಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡು ನುಡಿ ಬಗ್ಗೆ ಜನಪರ ಹೋರಾಟ ಮಾಡುತ್ತಿರುವ ಜಯ ಕರ್ನಾಟಕ ಸಂಘಟನೆ ಶಿಕ್ಷಣ ವ್ಯವಸ್ಥೆಯಲ್ಲಿ ಏಕರೂಪ ಮತ್ತು ಸಮಾನ ಶಿಕ್ಷಣ ವ್ಯವಸ್ಥೆ ಜಾರಿ ಮಾಡಬೇಕು ಎಂದು ರಾಜ್ಯ ವ್ಯಾಪಿ ಹೋರಾಟ ನಡೆಸಿದರೂ ಜನಪ್ರತಿನಿಧಿಗಳು ಈ ಕೋರಿಕೆಗೆ ಮನ್ನಣೆ ನೀಡುತ್ತಿಲ್ಲ. ಆದರೆ, ಸಂಘಟನೆ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವ ತನಕ ಹೋರಾಟ ಮಾಡುತ್ತದೆ ಎಂದು ಹೇಳಿದರು.ತಾಲೂಕು ಜಯ ಕರ್ನಾಟಕ ಗೌರವಾಧ್ಯಕ್ಷ ಕೆ.ಸುದರ್ಶನ್, ಅಧ್ಯಕ್ಷ ಐ.ಎನ್.ಅರುಣ್ಕುಮಾರ್, ನಗರಾಧ್ಯಕ್ಷ ಬೋಜೇಗೌಡ, ಉಪಾಧ್ಯಕ್ಷ ಸೋಮೇಶ್, ಕಾರ್ಯದರ್ಶಿ ಬಿ.ಎಲ್.ಲಕ್ಷ್ಮಣ್, ಶಿವರಾಜ್, ಉಮೇಶ್, ನಾಗರಾಜು ಇದ್ದರು.