ಡಿ.14ಕ್ಕೆ ಬಾಲಗಂಗಾಧರ ಪ್ರತಿಮೆ ಪ್ರತಿಷ್ಠಾಪನೆ
ಸಕಲೇಶಪುರ: ತಾಲೂಕಿನ ಕಳಲೆ ಕೂಡಿಗೆಯಲ್ಲಿ ದಿ. ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆಯನ್ನು ಡಿಸೆಂಬರ್ 14 ರಂದು ಪ್ರತಿಷ್ಠಾಪಿಸಲು ತೀರ್ಮಾನಿಸಲಾಗಿದೆ. ಶನಿವಾರಸಂತೆಯ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಆರ್.ಪಿ. ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ಪೂರ್ವ ಭಾವಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗರಾಜ್, ಜಿಪಂ ಸದಸ್ಯ ಭೈರಮುಡಿ ಚಂದ್ರು, ಕಳಲೆ ಕೆ.ಟಿ. ಕೃಷ್ಣೇಗೌಡ, ಎಸ್.ಪಿ. ಸುಬ್ಬಣ್ಣ ಬೆಂಗಳೂರಿನ ಉದ್ಯಮಿ ರವೀಂದ್ರ, ಹಾಡ್ಲಹಳ್ಳಿ ಗೋವಿಂದೇ ಗೌಡ, ಅಪ್ಪಸ್ವಾಮಿಗೌಡ ಇತರರು ಸಭೆಯಲ್ಲಿ ಸಲಹೆ ಸೂಚನೆ ನೀಡಿದರು. ಹೆತ್ತೂರು ಯಸಳೂರು ಹಾಗೂ ಸೋಮವಾರ ಪೇಟೆಯ ಪ್ರಮುಖರು ಇದ್ದರು. ಎಚ್.ಕೆ.ರಮೇಶ್ ಸ್ವಾಗತಿಸಿದರು. ಧರ್ಮಪ್ಪ ವಂದಿಸಿದರು.