ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಥಕ್ಕೆ ಕಟ್ಟಿದ್ದ ಧ್ವಜ ತೆಗೆದ ಜಿಲ್ಲಾಡಳಿತ

Rashmi Kasaragodu
Updated On : 5 Nov 2013, 11:51 am

ಕ.ಪ್ರ.ವಾರ್ತೆ   ಹಾಸನ   ನ. 5
ಹಾಸನಾಂಬೆ ದೇವಾಲಯದ ಶ್ರೀಸಿದ್ದೇಶ್ವರಸ್ವಾಮಿ ರಥಕ್ಕೆ ಕಟ್ಟಲಾಗಿದ್ದ ಹಿಂದು ಸಂಘಟನೆಯ ಧ್ವಜವನ್ನು ಜಿಲ್ಲಾಡಳಿತ ತೆಗೆಸಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನಾಂಬೆ ದೇವಾಲಯ ಮುಂದೆ ಪ್ರತಿಭಟನಕಾರರು ಕೆಲ ಸಮಯ ಧರಣಿ ನಡೆಸಿ ನಂತರ ದೇವಾಲಯ ರಥಕ್ಕೆ ಅಡ್ಡಲಾಗಿ ಕುಳಿತು ಪ್ರತಿಭಟಿಸಿದರು.
ಕಳೆದ ವರ್ಷ ರಥಕ್ಕೆ ಹಿಂದು ಸಂಘಟನೆಯ ಧ್ವಜವನ್ನು ಕುಟ್ಟುವ ಸಂದರ್ಭದಲ್ಲಿ ಈ ವರ್ಷ ಬೇಡ ಮುಂದಿನ ವರ್ಷ ಧ್ವಜ ಕಟ್ಟಲು ಅವಕಾಶ ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಅದರಂತೆ ಈ ಬಾರಿ ರಥಕ್ಕೆ ಹಿಂದು ಸಂಘಟನೆಯ ಧ್ವಜವನ್ನು ಕಟ್ಟಲಾಗಿತ್ತು. ಆದರೆ ಜಿಲ್ಲಾಡಳಿತ ಆ ಧ್ವಜವನ್ನು ಬಿಚ್ಚಿ ಕಟ್ಟದಂತೆ ಸೂಚಿಸಿತು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ರಥೋತ್ಸವಕ್ಕೆ ಅವಕಾಶ ನೀಡುವುದಿಲ್ಲ ಎಂದು ಹಠ ಹಿಡಿದರು.
ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆಯಿತು. ನಂತರ ಅಧಿಕಾರಿಗಳು ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಹಿಂದಕ್ಕೆ ಪಡೆದು ರಥೋತ್ಸವಕ್ಕೆ ಅನುವು ಮಾಡಿಕೊಟ್ಟರು.ಈ ಸಂದರ್ಭದಲ್ಲಿ ಪಿಕ್ಟರ್ ಪ್ಯಾಲೇಸ್ ಗುರುಪ್ರಸಾದ್, ಶ್ರೀರಾಮ ಸೇನೆಯ ಜಾನೆಕೆರೆ ಹೇಮಂತ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement