10ರಂದು ಮನೆ ಮನೆ ಕವಿಗೋಷ್ಠಿ
ಹಾಸನ: ಮನೆ-ಮನೆ ಕವಿಗೋಷ್ಠಿಯ 200ನೇ ಮಾಸಿಕ ಕಾರ್ಯಕ್ರಮವನ್ನು ನ.10ರಂದು ಸಂಜೆ 4.30ಕ್ಕೆ ನಗರದ ರಂಗೋಲಿಹಳ್ಳದಲ್ಲಿ ಇರುವ ಧ್ಯಾನ, ಪ್ರಾಣಾಯಾಮ ಮತ್ತು ವ್ಯಕ್ತಿತ್ವ ವಿಕಾಸ ಕೇಂದ್ರದಲ್ಲಿ ಆಯೋಜಿಸಲಾಗಿದೆ.ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ. ಕೆ.ಕೆ.ಜಯಚಂದ್ರಗುಪ್ತ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಕಾವ್ಯದಲ್ಲಿ ನಾಡು-ನುಡಿ ಕುರಿತು ಕವಯತ್ರಿ ಹಾಗೂ ವಚನಗಾರ್ತಿ ಸುಶೀಲ ಸೋಮಶೇಖರ ವಿಶ್ಲೇಷಿಸುವರು. ನಂತರ ಕವಿಗೋಷ್ಠಿ ಮತ್ತು ಸಂವಾದ ನಡೆಯಲಿದೆ. ಬಳಿಕ ಕನ್ನಡ ಗೀತಗಾಯನ ನಡೆಯಲಿದೆ ಎಂದು ಮನೆ ಮನೆ ಕವಿಗೋಷ್ಠಿ ಸಂಚಾಲಕ ಹಾಗೂ ಸದಸ್ಯ ಎಸ್.ಸತ್ಯನಾರಾಯಣ ತಿಳಿಸಿದ್ದಾರೆ. ದೂ.08172-246668 ಸಂಪರ್ಕಿಸಬಹುದು.