ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅನಧಿಕೃತ ಕೃಷಿ ಪಂಪ್‌ಸೆಟ್‌ಗಳ ಸಕ್ರಮ

Mainashree
Updated On : 6 Nov 2013, 10:47 am

ಹಾಸನ: ಅನಧಿಕೃತ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಸಂಬಂಧ ಈ ಹಿಂದೆ ಸ್ಥಗಿತಗೊಳಿಸಿದ್ದ ಅರ್ಜಿ ನೋಂದಣಿ ದಿನಾಂಕವನ್ನು ನ.30ರವರೆಗೆ ವಿಸ್ತರಿಸಿದ್ದು, ಅನಧಿಕೃತವಾಗಿ ತಮ್ಮ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಉಪಯೋಗಿಸುತ್ತಿರುವ ಬಳಕೆದಾರರು ಸಂಬಂಧಪಟ್ಟ ಉಪವಿಭಾಗದಲ್ಲಿ ತಮ್ಮ ಜಮೀನಿನ ಮಾಲೀಕತ್ವವನ್ನು ದೃಢೀಕರಿಸುವ ದಾಖಲೆಯೊಂದಿಗೆ ಈ ಕೆಳ ಕಂಡ ಹಣ ಪಾವತಿಸಿ ತಮ್ಮ ಅನಧಿಕೃತ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಬೇಕೆಂದು ಹಾಸನ ಚೆಸ್ಕಾಂ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ. ಅರ್ಜಿ ನೋಂದಣಿ ಶುಲ್ಕ 50, ಸಕ್ರಮ ಶುಲ್ಕವಾಗಿ 10,000, ಪ್ರಾರಂಭಿಕ ಭದ್ರತಾ ಠೇವಣಿ 3700, ಮೇಲ್ವಿಚಾರಣಾ ಶುಲ್ಕ 150, ಒಟ್ಟು 13,900 ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement