ಪರೀಕ್ಷೆಗೆ ತರಬೇತಿ
ಹಾಸನ: ಬೆಂಗಳೂರಿನಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಷನ್ ಡಿ.9ರಿಂದ ಸಿವಿಲ್ ಸರ್ವೀಸ್ ಪರೀಕ್ಷೆಯ ಪ್ರಿಲಿಮಿನರಿ ಪರೀಕ್ಷೆಗೆ ತರಬೇತಿ ಆಯೋಜಿಸಿದ್ದು, ಪ್ರವೇಶ ಪರೀಕ್ಷೆಯು ನ.29ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಪುರುಷರಿಗೆ ವಸತಿ ನಿಲಯದ ಸೌಲಭ್ಯವಿದೆ. ಅರ್ಹ ಆಸಕ್ತ ಉದ್ಯೋಗಾರ್ಥಿಗಳು ಈ ಸಂಬಂಧ ಹಾಸನದ ಕೃಷಿಕ್ ಸರ್ವೋದಯ ಫೌಂಡೇಷನ್ನಿನಲ್ಲಿ ಹೆಸರು ನೋಂದಾಯಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಮೊ. 9845493336 ಸಂಪರ್ಕಿಸಬಹುದು.
ನಿವೃತ್ತ ನೌಕರರ ಸಭೆ
ಹಾಸನ: 2011ರ ನವೆಂಬರ್ನಿಂದ 2012ರ ಮಾರ್ಚ್ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರು, 6ನೇ ವೇತನದ ಮಧ್ಯಂತರ ವೇತನ ಪಡೆದು ವೇತನ ಪರಿಷ್ಕರಣೆಯಲ್ಲಿ ಅನ್ಯಾಯವಾಗದಿರುವ ನೌಕರರು, ಸೇವೆ ವಿವರ ಸಲ್ಲಿಸದೇ ಇರುನ ನೌಕರರು ನ.8ರಂದು ನಗರದ ವಾಣಿವಿಲಾಸ ಪದವಿಪೂರ್ವ ಕಾಲೇಜಿನಲ್ಲಿ 11ಕ್ಕೆ ಭಾಗವಹಿಸಿ, ಸೇವಾ ವಿವರ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ವಿವರಕ್ಕೆ ಕಾರ್ಯದರ್ಶಿ ಯೋಗಾಸ್ವಾವು(9901017355) ಸಂಪರ್ಕಿಸಬಹುದು.
ಇಂಗ್ಲಿಷ್ ತರಬೇತಿ
ಹಾಸನ: ನಗರದ ಕೃಷಿಕ್ ಸರ್ವೋದಯ ಫೌಂಡೇಷನ್ ಸ್ಪೋಕನ್ ಇಂಗ್ಲಿಷ್ ತರಬೇತಿಗೆ ಮುಂದಿನ ಬ್ಯಾಚ್ ಪ್ರಾರಂಭಿಸಲಿದೆ ಎಂದು ಕಾರ್ಯದರ್ಶಿ ಎಚ್.ಪಿ.ಮೋಹನ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9845493336 ಸಂಪರ್ಕಿಸಿ.