ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜ್ಯೋತ್ಸವ ಆಚರಣೆ

Rashmi Kasaragodu
Updated On : 6 Nov 2013, 11:27 am

ಹಾಸನ: ನಗರದ ಸುಜಲ ಪ್ರಥಮ ದರ್ಜೆ ಕಾಲೇಜಿನಲ್ಲಿ 58ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಣ ನೆರವೇರಿಸಿದ ಸುಜಲ ವಿದ್ಯಾಸಂಸ್ಥೆಯ ಅಧ್ಯಕ್ಷ ಡಿ.ಸುಬ್ಬೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ,  ಪಂಪ, ರನ್ನ ಮತ್ತು ಬಸವಣ್ಣನವರು ಕನ್ನಡಕ್ಕಾಗಿ ಶ್ರಮಿಸಿದಂತೆ ಇಂದಿನ ಯುವ ಪೀಳಿಗೆಯೂ ಕನ್ನಡವನ್ನು  ಪೋಷಿಸಿ, ಬೆಳೆಸಿ ಉಳಿಸಬೇಕೆಂದು ಕರೆ ನೀಡಿದರು. ಸುಜಲ ವಿದ್ಯಾಸಂಸ್ಥೆ ಕಾರ್ಯದರ್ಶಿ ಲೋಕೇಶ್, ಕಾಲೇಜಿನ ಪ್ರಾಂಶುಪಾಲ ಕುಮಾರ್,  ಸುಜಲ ಪಿಯು ಕಾಲೇಜಿನ ಪ್ರಾಂಶುಪಾಲ ಜುಲ್ಫೀಕರ್ ಅಹಮ್ಮದ್, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.   ಉಪನ್ಯಾಸಕ ಮುಜಾಮ್ಮಿಲ್ ಪಾಷಾ ಸ್ವಾಗತಿಸಿದರು. ಆಂಗ್ಲ ಉಪನ್ಯಾಸಕ ಸುನಿಲ್ಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement