ಸಲಿಂಗಕಾಮ ಚಟುವಟಿಕೆ ಆರೋಪಿ ಡಾ. ಪಾಲಾಕ್ಷ ಮನೆ ಪರಿಶೀಲನೆ
ಹಾಸನ: ಸಲಿಂಗಕಾಮ ಚಟುವಟಿಕೆ ನಡೆಸುತ್ತಿದ್ದರು ಎಂಬ ಆರೋಪ ಹೊತ್ತಿರುವ ನಗರದ ವೈದ್ಯ ಡಾ. ಪಾಲಾಕ್ಷ ಸೇರಿ 14 ಜನರನ್ನು ಸೋಮವಾರ ಬಂಧಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ಬುಧವಾರ ಡಾ. ಪಾಲಾಕ್ಷರ ಮನೆಯನ್ನು ಪೊಲೀಸರು ಪರಿಶೀಲಿಸಿದರು. ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾದ ಮಹೇಶ್ ಮತ್ತು ಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳು ಪಾಲಾಕ್ಷ ಮನೆಯನ್ನು ತನಿಖೆ ಮಾಡಿದರು. ಈ ವೇಳೆ ವೈದ್ಯನ ಪತ್ನಿ ಇದ್ದರು.