ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸ್ವಉದ್ಯೋಗಕ್ಕೆ ವೃತ್ತಿ ಶಿಕ್ಷಣ ಪೂರಕ: ಜಮಾಲ್ ಅಹ್ಮದ್

Rashmi Kasaragodu
Updated On : 6 Nov 2013, 11:31 am

ಬೇಲೂರು: ಸ್ವಉದ್ಯೋಗಕ್ಕೆ ವೃತ್ತಿ ಶಿಕ್ಷಣ ತರಬೇತಿ ಸಹಕಾರಿಯಾಗಿದೆ ಎಂದು ಬೇಲೂರಿನ ಪುರಸಭೆ ಮಾಜಿ ಸದಸ್ಯ ಜಮಾಲ್ ಅಹ್ಮದ್ ಹೇಳಿದರು. ಅವರು ಜಿಲ್ಲಾ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ ಬೇಲೂರಿನ ನೆಹರು ನಗರದಲ್ಲಿ ಆದರ್ಶ  ಮಹಿಳಾ ಮಂಡಳಿ ವ್ಯವಸ್ಥೆಗೊಳಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಅನ್ವಯ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬನೆ ಬದುಕು ನಡೆಸಿದರೆ ಆರ್ಥಿಕಾಭಿವೃದ್ಧಿ ಸಾಧ್ಯವೆಂದರು.  ಬೇಲೂರಿನ ಮಹಿಳಾ ಮುಖಂಡರಾದ ಚಂದ್ರಕಲಾ ಮಾತನಾಡಿ, ವ್ಯವಸ್ಥಿತವಾಗಿ ಸಂಘಟನೆಗೊಂಡು ಅನುಭವಸ್ಥರ ಮಾರ್ಗದರ್ಶನದಲ್ಲಿ ಜೀವನಕ್ಕೆ ಪೂರಕವಾದ ಕೈಕಸುಬುಗಳನ್ನು ಕಲಿಯಬೇಕು. ಆಗಲೇ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವೆಂದರು. ನೆಹರು ಯುವ ಕೇಂದ್ರದ ಪರವಾಗಿ ಆಗಮಿಸಿದ್ದ ಲೆಕ್ಕಾಧಿಕಾರಿ ಎಂ.ಎನ್.ಮಂಜುನಾಥ್ರಾವ್ ಮಾತನಾಡಿ,  ನೆಹರು ಯುವ ಕೇಂದ್ರದ ಪ್ರಮುಖ ಧ್ಯೇಯೋದ್ದೇಶಗಳಲ್ಲಿ ಮಹಿಳಾಭಿವೃದ್ಧಿ ಸಹ ಒಂದಾಗಿದೆ. ನೆಹರು ಯುವ ಕೇಂದ್ರ ನೀಡುತ್ತಿರುವ ಈ ತರಬೇತಿಯ ಪ್ರಯೋಜನ ಪಡೆದು ಗ್ರಾಮೀಣ ಭಾಗದ ಮಹಿಳೆಯರು ಮುಂದೆ ಸ್ವಯಂ ಉದ್ಯೋಗಿಗಳಾಗಬೇಕೆಂದರು. ಮಂಡಳಿಯ ಕಾರ್ಯದರ್ಶಿ ಹಮೀದಾ ಭಾನು ಆದರ್ಶ ಮಹಿಳಾ ಮಂಡಳಿ ಬೆಳೆದು ಬಂದ ರೀತಿ ವಿವರಿಸಿ, ವಂದಿಸಿದರು. ದಸ್ತಗೀರ್ ಹಾಗೂ ಮಮತಾ ಮಂಜುನಾಥ್ ವೇದಿಕೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement