ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

16ರಿಂದ ಕಬ್ಬಳಿಯಲ್ಲಿ 82ನೇ ದನಗಳ ಜಾತ್ರೆ

Rashmi Kasaragodu
Updated On : 8 Nov 2013, 12:22 pm

ಕ.ಪ್ರ.ವಾರ್ತೆ    ಚನ್ನರಾಯಪಟ್ಟಣ    ನ.7
ತಾಲೂಕಿನ ಹಿರೀಸಾವೆ ಹೋಬಳಿ ಕಬ್ಬಳಿ ಬಸವೇಶ್ವರ ಸ್ವಾಮಿಯ ಸನ್ನಿದಿಯಲ್ಲಿ 82ನೇ ದನಗಳ ಜಾತ್ರೆ ನ.16ರಿಂದ ಪ್ರಾರಂಭವಾಗಲಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಬುನಾಥ ಸ್ವಾಮೀಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನ.16ರಿಂದ ಪ್ರಾರಂಭವಾಗಲಿರುವ ದನಗಳ ಜಾತ್ರೆ ಹಾಗೂ ಬಸವೇಶ್ವರ ಸ್ವಾಮಿಯ ಧಾರ್ಮಿಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ನ.16ರಿಂದ ನ.23ರವರಗೆ ದನಗಳ ಜಾತ್ರೆ ನಡೆಯಲಿದ್ದು, ಜಾತ್ರಾ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠಾದೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದು, ಅಂದಿನಿಂದ ಬಸವೇಶ್ವರ ಸ್ವಾಮಿಗೆ ಪ್ರತಿದಿನ ವಿವಿದ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ದನಗಳ ಜಾತ್ರೆ ಅಂಗವಾಗಿ ರೈತರಿಗೆ ತಾಂತ್ರಿಕ ಹಾಗೂ ಆಧುನಿಕ ಕೃಷಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ  ಪ್ರಸಕ್ತ ಸಾಲಿನಿಂದ ಕೃಷಿ ಮೇಳ ಹಾಗೂ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಜಾತ್ರಾ ಸಂದರ್ಭದಲ್ಲಿ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸಕಲ ಸಿದ್ಧತೆ ನಡೆದಿದ್ದು, ಕ್ಷೇತ್ರದ ಪಕ್ಕದಲ್ಲಿರುವ ಕಟ್ಟೆಯಲ್ಲಿ ಅಗತ್ಯದಷ್ಟು ನೀರು ಸಂಗ್ರಹವಾಗಿದೆ. ಇದರ ಜತೆಗೆ 6 ಟ್ಯಾಂಕರ್ ಮುಖೇನ ನೀರು ಸರಬರಾಜಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಜಾತ್ರೆಗೆ ಆಗಮಿಸಿದ ಭಕ್ತರು ಹಾಗೂ ರೈತರಿಗೆ ಮನರಂಜನೆ ನೀಡುವ ಸಲುವಾಗಿ ಪ್ರತಿ ದಿನ ರಾತ್ರಿ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ರೈತರಿಗಾಗಿ ವಿವಿದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನ.16ರಂದು ಮುಂಜಾನೆ ಅಭಿಷೇಕ, ಗಣಪತಿ ಹೋಮ ಸಂಜೆ ನಿರ್ಮಲಾನಂದ ನಾಥ ಸ್ವಾಮೀಜಿ ಅವರಿಂದ ಧರ್ಮದ್ವಜಾರೋಹಣ ಹಾಗೂ   ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು, ನ.17ರಂದು ಬೆಳಗ್ಗೆ  ರುದ್ರಾಭಿಷೇಕ,  ಸಂಜೆ ಅಂಬಳೆ ರಾಜೇಶ್ವರಿ ತಂಡದವರಿಂದ ಭರತ ನಾಟ್ಯ,  ಹಾಗೂ ಸೈಕಲ್ ಸ್ಪರ್ಧೆ ಏರ್ಪಡಿಸಲಾಗಿದೆ.
ನ.18ರಂದು ಪಂಚಾಮೃತಭಿಷೇಕ, ಸರ್ಪವಾಹನೋತ್ಸವ, ಭಾಲಗಂಗಾಧರನಾಥ ಸ್ವಾಮೀಜಿ ಅವರ ಪತ್ತಳಿಕೆಯೊಡನೆ ಮತ್ತಿನ ಪಲ್ಲಕ್ಕಿ ಉತ್ಸವ, ಕ್ಷೇತ್ರದ ಕಲ್ಯಾಣಿಯಲ್ಲಿ ಬಸವೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ಅಮ್ಮನವರ ತೆಪ್ಪೋತ್ಸವ,  ನ.19ರಂದು  ಬಸವೇಶ್ವರ ಸ್ವಾಮಿಗೆ ಅಭಿಷೇಕ,  ಬೆಣ್ಣೆ ಅಲಂಕಾರ ಸಂಜೆ ನೃತ್ಯಾಂಜಲಿ ಕಲಾ ತಂಡದ ವತಿಯಿಂದ ಭರತ ನಾಟ್ಯ ಹಾಗೂ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.
ನ.20ರಂದು ಬೆಳಗ್ಗೆ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಸಂಜೆ ಸುಗಮ ಸಂಗೀತ ಹಾಗೂ ಹಗ್ಗ ಜಗ್ಗಾಟ, ನ.21ರಂದು ಭಕ್ತರಿಂದ ವಿವಿದ ಪೂಜಾ ಕಾರ್ಯಕ್ರಮ. ಸಂಜೆ ಜ್ಞಾನಜ್ಯೋತಿ ಕಲಾಸಂಘ ಚನ್ನರಾಯಪಟ್ಟಣ ಇವರಿಂದ ನಾಟಕ ಪ್ರದರ್ಶನ. ನ.22ರಂದು ಅರಸೀಕೆರೆ ಶೋಭಾರಾಣಿ ತಂಡದಿಂದ ನೃತ್ಯ ಸಂಜೆ ಹಾಗೂ ವಿವಿದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮಿಜಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯ್ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement