ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದಿನಿಂದ ವೈದ್ಯ ಕಾಲೇಜಿನಲ್ಲಿ ರಾಜ್ಯ ನೇತ್ರ ತಜ್ಞರ ಸಮ್ಮೇಳನ

Rashmi Kasaragodu
Updated On : 8 Nov 2013, 12:22 pm

ಹಾಸನ: ನಗರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ  ನ.8 ರಂದು ಸಂಜೆ 6ಕ್ಕೆ ರಾಜ್ಯ ನೇತ್ರ ತಜ್ಞರ ಸಮ್ಮೇಳನ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ನೇತ್ರ ತಜ್ಞರ ಸಂಘದ ಪಿ.ಎಲ್. ನಟರಾಜ್ ತಿಳಿಸಿದರು. ನಗರದಲ್ಲಿ  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಹಾಗೂ ಹಿರಿಯ ನೇತ್ರ ತಜ್ಞ ಡಾ. ಕೆ.ಎಸ್. ಪ್ರಕಾಶ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.  ಈ ವರ್ಷ ವಿಶ್ವ ದೃಷ್ಟಿ ದಿನವಾದ ಅಕ್ಟೋಬರ್ 10 ರಂದು ಅಂಗೀಕರಿಸಲಾದ ಸರ್ವರಿಗೂ ಕಣ್ಣಿನ ಆರೋಗ್ಯ ಎಂಬ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ನೇತ್ರ ವಿಭಾಗದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ 360 ಡಿಗ್ರಿ ಎಂಬ ವಿಷಯ ಚರ್ಚಿಸಲಾಗುವುದು ಎಂದು ಹೇಳಿದರು.  ಸುದ್ದಿಗೋಷ್ಠಿಯಲ್ಲಿ ರಾಜ್ಯ ನೇತ್ರ ತಜ್ಞರ ಸಂಘದ ಖಜಾಂಚಿ ವೈ.ಎಸ್. ಜಗದೀಶ್, ಛೇರ್ಮನ್ ಎ.ಆರ್. ಶಂಕರ್, ಬಿ.ಎಚ್. ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement