ಇಂದು ಕಾನೂನು ಸಂಬಂಧಿತ ಕಾರ್ಯಾಗಾರ
ಹಾಸನ: ಕಾನೂನು ಯುವ ಚಿಂತನ ಬಳಗದ ವತಿಯಿಂದ ನ.9 ರಂದು ಬೆಳಗ್ಗೆ 10.30ಕ್ಕೆ ಸರ್ಕಾರಿ ಕಾನೂನು ಕಾಲೇಜಿನಲ್ಲಿ ರಾಜ್ಯಮಟ್ಟದ ಕಾನೂನು ಸಂಬಂಧಿತ ಸಮಸ್ಯೆ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಬೆಂಗಳೂರು ಸೆಷನ್ಸ್ ನ್ಯಾಯಾಧೀಶ ಪಿ.ಜೆ. ಮರಿಯಪ್ಪ ಉದ್ಘಾಟಿಸುವರು. ಸಹ ಪ್ರಾಧ್ಯಾಪಕ ವಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ, ವಕೀಲ ಲಕ್ಷ್ಮಣ್ ಚಿಣ್ಚೀರನಹಳ್ಳಿ ಭಾಗವಹಿಸುವರು.
ಜಿಲ್ಲಾ ಮಹಿಳಾ ಸಮಾವೇಶ ಇಂದು
ಹೊಳೆನರಸೀಪುರ: ಇಲ್ಲಿನ ವಿವೇಕ ಜಾಗೃತ ಬಳಗದಿಂದ ನ.9ರಂದು ಜಿಲ್ಲಾ ಮಹಿಳಾ ಸಮಾವೇಶವನ್ನು ಪಟ್ಟಣದ ಕೊಟೆ ರಾಘವೇಂದ್ರ ಮಠದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ರೇಖಾನಾಗರಾಜ್ ತಿಳಿಸಿದ್ದಾರೆ.